ಸಿಎಂ ಅಧಿಕೃತ ನಿವಾಸ ಕಾವೇರಿ ಬಳಿ ಬಿಗಿ ಭದ್ರತೆ….

ಬೆಂಗಳೂರು,ಮಾರ್ಚ್,31,2021(www.justkannada.in):  ಆತ್ಮಹತ್ಯೆಗೆ ಯತ್ನಿಸಿದ್ಧ ಟ್ಯಾಕ್ಸಿ ಚಾಲಕ ಸಾವನ್ನಪ್ಪಿದ ಹಿನ್ನೆಲೆ ಟ್ಯಾಕ್ಸಿ ಚಾಲಕರು ಇಂದು ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು ಹೀಗಾಗಿ ಸಿಎಂ ಅಧಿಕೃತ ನಿವಾಸ  ಕಾವೇರಿಗೆ ಬಿಗಿ ಭದ್ರತೆ ವಹಿಸಲಾಗಿದೆ.Government,Social,Economic,Educational,survey,Report,Should,receive,Former CM,Siddaramaiah 

ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಟ್ಯಾಕ್ಸಿ ಚಾಲಕರೊಬ್ಬರು ಮನನೊಂದು ಏರ್ ಪೋರ್ಟ್ ನಲ್ಲೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ನಡುವೆ ಅವರನ್ನ ಆಸ್ಪತ್ರೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಟ್ಯಾಕ್ಸಿ ಚಾಲಕ ಸಾವನ್ನಪ್ಪಿದರು.Tight security -near -CM -official -residence -caveri.

ಈ ಹಿನ್ನೆಲೆಯಲ್ಲಿ ಇಂದು ಸಿಎಂ ಅಧಿಕೃತ ನಿವಾಸದ ಬಳಿ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು ಹೀಗಾಗಿ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ನಿಗದಿಗಿಂತ ಹೆಚ್ಚುವರಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Tight security -near -CM -official -residence -caveri.