Tuesday, September 22, 2026

BDA Apartments

ಮೈಸೂರಿನಲ್ಲಿ ಕೊನೆಗೂ ನರಭಕ್ಷಕ ಹುಲಿ ಸೆರೆ BDA JK_Adv BDA Adv
Home Front Page ಮೈಸೂರಿನಲ್ಲಿ ಕೊನೆಗೂ ನರಭಕ್ಷಕ ಹುಲಿ ಸೆರೆ.

ಮೈಸೂರಿನಲ್ಲಿ ಕೊನೆಗೂ ನರಭಕ್ಷಕ ಹುಲಿ ಸೆರೆ.

ಮೈಸೂರು,ನವೆಂಬರ್,28,2023(www.justkannada.in):  ನಂಜನಗೂಡು ಕಾಡಂಚಿನ ಗ್ರಾಮಗಳ ಜನರನ್ನ ಬೆಚ್ಚಿ ಬೀಳಿಸಿದ್ದ ನರಭಕ್ಷಕ  ಹುಲಿ ಕೊನೆಗೂ ಸೆರೆ ಸಿಕ್ಕಿದೆ.

ಇಬ್ಬರು ದನಗಾಹಿಗಳು, ಜಾನುವಾರುಗಳನ್ನ ಹುಲಿ ಬಲಿ ಪಡೆದಿತ್ತು.  ಅರಣ್ಯ ಇಲಾಖೆ ಸಿಬ್ಬಂದಿ ಮಧ್ಯರಾತ್ರಿ ನಡೆಸಿದ ಹುಲಿ ಕಾರ್ಯಾಚರಣೆ ಯಶಸ್ವಿಯಾಗಿದೆ. ನೂರು ಜನ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 50ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಿ, ಡ್ರೋನ್ ಕ್ಯಾಮೆರಾದ ಮೂಲಕ ಹುಲಿಯ ಚಲನ ವಲನಗಳ ಪತ್ತೆ ಹಚ್ಚಿ ಹುಲಿಯನ್ನ ಸೆರೆ ಹಿಡಿದಿದ್ದಾರೆ.ಮೈಸೂರಿನಲ್ಲಿ ಕೊನೆಗೂ ನರಭಕ್ಷಕ ಹುಲಿ ಸೆರೆ tiger (1) tiger 1

ಸೆರೆಹಿಡಿದ ಹುಲಿ ಮೈಸೂರಿನ‌ ಕೂರ್ಗಳ್ಳಿ ಸಮೀಪದ ಪ್ರಾಣಿಗಳ ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ವ್ಯಾಘ್ರನ ಆರೋಗ್ಯ ತಪಾಸಣೆ ನಂತರ ಅರಣ್ಯ‌ ಇಲಾಖೆ  ಮುಂದಿನ ಕ್ರಮ ಕೈಗೊಳ್ಳಲಿದೆ.

Key words: tiger –finally- caught – Mysore.