Saturday, October 17, 2026

Dasara Wishes

Financial aid DasraWishes_JK DasraWishes JK
Happy Dasara
Home Front Page ಬಿಜೆಪಿಯಲ್ಲಿ ಗೆಲ್ಲುವವರಿಗೆ ಟಿಕೆಟ್- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.

ಬಿಜೆಪಿಯಲ್ಲಿ ಗೆಲ್ಲುವವರಿಗೆ ಟಿಕೆಟ್- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.

ಬೆಂಗಳೂರು,ಏಪ್ರಿಲ್,7,2023(www.justkannada.in): ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ಎರಡು ದಿನಗಳ ರಾಜ್ಯ ಚುನಾವಣಾ ಸಮಿತಿ ಸಭೆ ನಡೆದಿದ್ದು,  ಪ್ರತಿ ಕ್ಷೇತ್ರಕ್ಕೆ ತಲಾ ಮೂರು ಸಂಭಾವ್ಯ ಅಭ್ಯರ್ಥಿಗಳ ಹೆಸರು ಅಂತಿಮ ಮಾಡಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿಯಲ್ಲಿ ಗೆಲ್ಲುವವರಿಗೆ ಟಿಕೆಟ್ ನೀಡಲಾಗುತ್ತದೆ.  ಟಿಕೆಟ್ ಗಾಗಿ ಒತ್ತಡ ಇರೋದು ನಿಜ. ಈಗಾಗಲೇ ಒಂದು ಕ್ಷೇತ್ರಕ್ಕೆ ಎರಡು ಮೂರು ಹೆಸರನ್ನು ಅಂತಿಮಗೊಳಿಸಲಾಗಿದೆ. ಅಂತಿಮ ಪಟ್ಟಿ ಹೈಕಮಾಂಡ್ ಗೆ ಸಲ್ಲಿಸಲಾಗಿದೆ.  ಯಾರು ಗೆಲ್ತಾರೆ ಅಂತಾ ಚರ್ಚಿಸಿ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.ಬಿಜೆಪಿಯಲ್ಲಿ ಗೆಲ್ಲುವವರಿಗೆ ಟಿಕೆಟ್- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ bsy

Key words: Ticket – win – BJP- Former CM- BS Yeddyurappa.