Saturday, October 17, 2026

Dasara Wishes

Happy Dasara
Home Front Page ಡಿಕೆಶಿ, ಸಿದ್ಧರಾಮಯ್ಯ ನನ್ನ ಬೆನ್ನಿಗೆ ನಿಂತಿದ್ದಾರೆ; ಟಿಕೆಟ್ ಸಿಗುವ ವಿಶ್ವಾಸವಿದೆ- ಅಖಂಡ ಶ್ರೀನಿವಾಸಮೂರ್ತಿ.

ಡಿಕೆಶಿ, ಸಿದ್ಧರಾಮಯ್ಯ ನನ್ನ ಬೆನ್ನಿಗೆ ನಿಂತಿದ್ದಾರೆ; ಟಿಕೆಟ್ ಸಿಗುವ ವಿಶ್ವಾಸವಿದೆ- ಅಖಂಡ ಶ್ರೀನಿವಾಸಮೂರ್ತಿ.

ಬೆಂಗಳೂರು,ಏಪ್ರಿಲ್,7,2023(www.justkannada.in):  ಡಿ.ಕೆ ಶಿವಕುಮಾರ್ ಸಿದ್ಧರಾಮಯ್ಯ ಹಾಗೂ ಜಮೀರ್ ಅಹ್ಮದ್ ಖಾನ್ ನನ್ನ ಬೆನ್ನಿಗೆ ನಿಂತಿದ್ದಾರೆ. ಕೈ ಅಭ್ಯರ್ಥಿಗಳ 3ನೇ ಪಟ್ಟಿಯಲ್ಲಿನನಗೆ ಟಿಕಟ್ ಸಿಗುತ್ತದೆ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿರುವ  ಕಾಂಗ್ರೆಸ್ 3ನೇ ಪಟ್ಟಿ ಬಿಡುಗಡೆ ತಯಾರಿಯಲ್ಲಿದೆ. ಈ ನಡುವೆ ಹಲವು ಟಿಕೆಟ್ ಆಕಾಂಕ್ಷಿಗಳು ಸಿದ್ಧರಾಮಯ್ಯರನ್ನ ಭೇಟಿಯಾಗಿ ಟಿಕೆಟ್ ಗೆ ಮನವಿ ಮಾಡುತ್ತಿದ್ದಾರೆ. ಈ ಮಧ್ಯೆ ಇಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹ ಸಿದ್ಧರಾಮಯ್ಯರನ್ನ ಭೇಟಿಯಾಗಿ ಚರ್ಚಿಸಿದರು.ಡಿಕೆಶಿ, ಸಿದ್ಧರಾಮಯ್ಯ ನನ್ನ ಬೆನ್ನಿಗೆ ನಿಂತಿದ್ದಾರೆ; ಟಿಕೆಟ್ ಸಿಗುವ ವಿಶ್ವ...

ಬಳಿಕ ಮಾತನಾಡಿದ ಅಖಂಡ ಶ್ರೀನಿವಾಸಮೂರ್ತಿ,   ನನಗೆ 3ನೇ ಪಟ್ಟಿಯಲ್ಲಿ ಟಿಕೆಟ್ ಸಿಗುವ ವಿಶ್ವಾಸವಿದೆ. ನಾನು ಯಾವುದೇ ಪಕ್ಷಾಂತರವಾಗುವ ಆಲೋಚನೆ ಮಾಡಿಲ್ಲ. ಕಾಣದ ಕೈಗಳ ಕೈವಾಡದ ಬಗ್ಗೆ ಮಾಹಿತಿ ಇಲ್ಲ ಎಂದರು.

Key words: DK shivakumar-Siddaramaiah – confident – ticket – Akhand Srinivasamurthy.