Sunday, September 20, 2026

BDA Apartments

ಬೆಂಗಳೂರಿನಲ್ಲಿ ಮತ್ತೆ ಮೂವರು ಪಾಕ್ ಪ್ರಜೆಗಳ ಬಂಧನ BDA JK_Adv BDA Adv
Home Crime ಬೆಂಗಳೂರಿನಲ್ಲಿ ಮತ್ತೆ ಮೂವರು ಪಾಕ್ ಪ್ರಜೆಗಳ ಬಂಧನ

ಬೆಂಗಳೂರಿನಲ್ಲಿ ಮತ್ತೆ ಮೂವರು ಪಾಕ್ ಪ್ರಜೆಗಳ ಬಂಧನ

ಬೆಂಗಳೂರು,ಅಕ್ಟೋಬರ್,3,2024 (www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮೂವರು ಪಾಕ್ ಪ್ರಜೆಗಳನ್ನ ಪೊಲೀಸರು ಬಂಧಿಸಿದ್ದಾರೆ.

ಜಿಗಣಿಯಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದು,  ಈ ಮೂಲಕ 3-4 ದಿನಗಳಲ್ಲಿ ಐದಕ್ಕೂ ಹೆಚ್ಚು ಪಾಕಿಸ್ತಾನದ ಪ್ರಜೆಗಳನ್ನು ಬಂಧಿಸಿದಂತಾಗಿದೆ. ಕಳೆದ ಸೋಮವಾರ ಜಿಗಣಿ ಬಳಿ ನಾಲ್ವರು ಪಾಕ್ ಪ್ರಜೆಗಳನ್ನು ಬಂಧಿಸಲಾಗಿತ್ತು. ಪಾಕಿಸ್ತಾನದ ಪೇಶಾವರ ಮೂಲದ ರಷೀದ್ ಅಲಿ ಸಿದ್ದಿಕಿ ಕುಟುಂಬದ ನಾಲ್ವರನ್ನು ಬಂಧಿಸಲಾಗಿತ್ತು.

ಅವರನ್ನು ತನಿಖೆಗೆ ಒಳಪಡಿಸಿದಾಗ ತಿಳಿದುಬಂದ ಮಾಹಿತಿ ಮೇರೆಗೆ ಇದೀಗ ಪೀಣ್ಯದಲ್ಲಿ ವಾಸವಿದ್ದ ಪತಿ, ಪತ್ನಿ ಹಾಗೂ ಪುತ್ರಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಂಧಿತರನ್ನು ವಿಚಾರಣೆ ನಡೆಸಿದಾಗ ಒಟ್ಟು 15 ಮಂದಿ ಭಾರತಕ್ಕೆ ನುಸುಳಿರುವುದು ಬಯಲಾಗಿದೆ.

ಬೆಂಗಳೂರಿನಲ್ಲಿ ಮತ್ತೆ ಮೂವರು ಪಾಕ್ ಪ್ರಜೆಗಳ ಬಂಧನ VTU TOP BANNER 04

Key words: Three more , Pakistani, arrested,  Bengaluru