Thursday, October 15, 2026

Dasara Wishes

Happy Dasara
Home Front Page ಜೂ,19ರಿಂದ ಮೂರು ದಿನಗಳ ಕಾಲ ಭಕ್ತರಿಗೆ ಮಲೆ ಮಹದೇಶ್ವರನ ದರ್ಶನಕ್ಕೆ ನಿರ್ಬಂಧ…

ಜೂ,19ರಿಂದ ಮೂರು ದಿನಗಳ ಕಾಲ ಭಕ್ತರಿಗೆ ಮಲೆ ಮಹದೇಶ್ವರನ ದರ್ಶನಕ್ಕೆ ನಿರ್ಬಂಧ…

ಚಾಮರಾಜನಗರ, ಜೂ,18,2020(www.justkannada.in): ಕೊರೋನಾ ಭೀತಿ ಹಿನ್ನೆಲೆ ಜೂನ್ 19 ರಿಂದ ಮಲೆಮಹದೇಶ್ವರ ದೇವಸ್ಥಾನದ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್ ರವಿ ಆದೇಶ ಹೊರಡಿಸಿದ್ದಾರೆ.

ಕೊರೊನಾ ಲಾಕ್ ಡೌನ್ ಬಳಿಕ ಜೂನ್ 8ರಿಂದ ದೇವಸ್ಥಾನಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಹೀಗಾಗಿ ಮಲೆ ಮಹದೇಶ್ವರ ದೇಗುಲ ತೆರೆಯಲಾಗಿತ್ತು. ಆದರೆ ದೇವಸ್ಥಾನದಲ್ಲಿ ಜೂನ್ 19 ರಂದು ಎಣ್ಣೆಮಜ್ಜನ, ಜೂನ್, 20 ಮತ್ತು 21 ರಂದು ಅಮವಾಸ್ಯೆ ಪೂಜೆ ಇರುವ ಹಿನ್ನೆಲೆ  ಮಹದೇಶ್ವರ ಬೆಟ್ಟಕ್ಕೆ ಜನ ಹೆಚ್ಚಾಗಿ ಸೇರುವ ಸಾಧ್ಯತೆ ಇದೆ.three-days-june-19-devotees-male-mahadeshwara-temple-chamarajanagar-restricted

ಹೀಗಾಗಿ ಜೂನ್ 19, 20 ಮತ್ತು 21 ರಂದು ಮಹದೇಶ್ವರನ ಭಕ್ತರ ದರ್ಶನಕ್ಕೆ ನಿರ್ಬಂಧ ವಿಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್ ರವಿ ಆದೇಶ ಹೊರಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: three days – June 19- devotees -Male Mahadeshwara temple chamarajanagar -restricted.