Thursday, October 15, 2026

Dasara Wishes

Happy Dasara
Home Front Page ಹೆಚ್.ವಿಶ್ವನಾಥ್ ಗೆ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ ವಿಚಾರ ಕುರಿತು ಆರ್. ಶಂಕರ್ ಪ್ರತಿಕ್ರಿಯಿಸಿದ್ದು...

ಹೆಚ್.ವಿಶ್ವನಾಥ್ ಗೆ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ ವಿಚಾರ ಕುರಿತು ಆರ್. ಶಂಕರ್ ಪ್ರತಿಕ್ರಿಯಿಸಿದ್ದು ಹೀಗೆ…

ಬೆಂಗಳೂರು,ಜೂ,18,2020(www.justkannada.in):  ಮಾಜಿ ಸಚಿವ ಹೆಚ್.ವಿಶ್ವನಾಥ್ ಬೈ ಎಲೆಕ್ಷನ್ ನಲ್ಲಿ ನಿಲ್ಲದೇ ಹೋಗಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ. ಅವರು ಸಮಾಧಾನದಿಂದ ಇದ್ದರೇ ಅವರಿಗೆ ಮುಂದೆ ಟಿಕೆಟ್ ಸಿಗುತ್ತದೆ ಎಂದು ಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿ ಆರ್.ಶಂಕರ್ ತಿಳಿಸಿದ್ದಾರೆ.h-vishwanath-mlc-ticket-r-shankar

ಹೆಚ್. ವಿಶ್ವನಾಥ್ ಗೆ ವಿಧಾನಪರಿಷತ್ ಬಿಜೆಪಿ ಟಿಕೆಟ್ ಕೈತಪ್ಪಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಶಂಕರ್, ಹೆಚ್.ವಿಶ್ವನಾಥ್ ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದವರು. ಬೈ ಎಲೆಕ್ಷನ್ ನಲ್ಲಿ ನಿಲ್ಲದೇ ಹೋಗಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ. ಈಗ ಸ್ಪರ್ಧಿಸಬೇಡಿ. ಎಂಎಲ್ ಸಿ ಮಾಡುತ್ತೇವೆ ಎಂದಿದ್ದರು. ಆದರೆ ಹೆಚ್.ವಿಶ್ವನಾಥ್ ಆಗ ಮಾತು ಕೇಳದೇ ದುಡುಕಿದ್ರು ಅನ್ಸುತ್ತೆ ಎಂದು ನುಡಿದರು.

ನನ್ನನ್ನ ಕ್ಷೇತ್ರದ ಜನತೆ ಪಕ್ಷೇತರನಾಗಿ ಗೆಲ್ಲಿಸಿದ್ರು. ಹೀಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮತ್ತೆ ಕ್ಷೇತ್ರದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಆರ್.ಶಂಕರ್ ಹೇಳಿದರು.

Key words: H. Vishwanath –MLC-ticket-R.Shankar