Thursday, October 15, 2026

Dasara Wishes

Happy Dasara
Home Cinema ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ‘ಡಿಪ್ರೆಷನ್’ ಪೋಸ್ಟ್ ವೈರಲ್ !

ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ‘ಡಿಪ್ರೆಷನ್’ ಪೋಸ್ಟ್ ವೈರಲ್ !

ಮುಂಬೈ, ಜೂನ್ 18, 2020 (www.justkannada.in): ಸಾಮಾಜಿಕ ಜಾಲತಾಣಗಳಲ್ಲಿ ಡಿಪ್ರೆಷನ್ ಕುರಿತು ದೀಪಿಕಾ ಪೋಸ್ಟ್ ಮಾಡಿದ್ದಾರೆ.

ಕೆಲ ವರ್ಷಗಳ ಹಿಂದೆ ದೀಪಿಕಾ ಪಡುಕೋಣೆ ಸಹ ಡಿಪ್ರೆಷನ್ ಗೆ ಒಳಗಾಗಿದ್ದರು. ಅದಕ್ಕೆ ಚಿಕಿತ್ಸೆಯನ್ನು ಪಡೆದು ಈಗ ಅದರಿಂದ ಹೊರಬಂದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಹಾಗೂ ಮೀಡಿಯಾ ಮುಂದೆ ಬಹಿರಂಗವಾಗಿ ಹೇಳಿಕೊಂಡಿದ್ದರು.

“ಮಾನಸಿಕ ಸಮಸ್ಯೆಯನ್ನು ಅನುಭವಿಸಿರುವ ವ್ಯಕ್ತಿಯಾಗಿ, ಅದನ್ನು ಹೇಳಿಕೊಳ್ಳಲು ಅದರ ನೋವನ್ನು ಕೇಳಿಸಿಕೊಳ್ಳುವುದರ ನೋವು ನನಗೆ ತಿಳಿದಿದೆ. ಮಾತನಾಡಿ, ಪ್ರೀತಿಪಾತ್ರರೊಡನೆ ಸಂಪರ್ಕದಲ್ಲಿರಿ, ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ, ಅಗತ್ಯವಿದ್ದಲ್ಲಿ ಸಹಾಯ ಕೇಳಿ.. ನೆನಪಿಡಿ, ನೀವು ಒಂಟಿ ಅಲ್ಲ…

ನಾವೆಲ್ಲರೂ ಇದರಲ್ಲಿ ಒಟ್ಟಿಗೆ ಇದ್ದೇವೆ… ಎಲ್ಲಕ್ಕಿಂತ ಮುಖ್ಯವಾಗಿ, ಭರವಸೆ ಇದೆ..” ಎಂದು ಬರೆದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ದೀಪಿಕಾ ಪಡುಕೋಣೆ…