Thursday, September 10, 2026

BDA Apartments

Home Cinema ಜೈಲಿನಿಂದ ಬಿಡುಗಡೆಯಾದ ಬಳಿಕ ರಾಗಿಣಿ ಮಾಡಿದ ಮೊದಲ ಕೆಲಸ ಇದು…!

ಜೈಲಿನಿಂದ ಬಿಡುಗಡೆಯಾದ ಬಳಿಕ ರಾಗಿಣಿ ಮಾಡಿದ ಮೊದಲ ಕೆಲಸ ಇದು…!

ಬೆಂಗಳೂರು, ಜನವರಿ 26, 2021 (www.justkannada.in): ಜೈಲಿನಿಂದ ಬಿಡುಗಡೆಯಾದ ಕೂಡಲೇ ಸಮೀಪದ ಜಡೇ ಮುನೇಶ್ವರ ಸ್ವಾಮಿ ದೇವಾಲಯಕ್ಕೆ ರಾಗಿಣಿ ಪೂಜೆ ಸಲ್ಲಿಸಿದ್ದಾರೆ.

ಪೂಜೆ ತನ್ನ ತಂದೆ ಹಾಗೂ ತಾಯಿ ಜತೆಗೆ ಜೈಲು ಬಳಿ ಸೇರಿದ್ದ ಸಿನಿ ಗೆಳೆಯರೊಂದಿಗೆ ಕಾರಿನಲ್ಲಿ ಮನೆಗೆ ತೆರಳಿದರು.

ರಾಗಿಣಿ ಬಿಡುಗಡೆಯಾಗಿ ಹೊರ ಬಂದರೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ. ವಕೀಲರ ಸಲಹೆ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಲು ನಿರಾಕರಿಸಿದರು ಎನ್ನಲಾಗಿದೆ.

ನೂರು ನಲವತ್ತಕ್ಕೂಹೆಚ್ಚು ದಿನ ಜೈಲಿನಲ್ಲಿ ಕಳೆದಿದ್ದ ರಾಗಿಣಿ ಗಣರಾಜ್ಯೋತ್ಸವ ದಿನಕ್ಕೂ ಮುನ್ನ ದಿನ ಬಿಡುಗಡೆಯಾಗಿ ಮನೆ ಸೇರಿದರು.

ರಾಗಿಣಿಯನ್ನು ಹಾರೈಕೆ ಮಾಡಿದ್ದ ಸಿಬ್ಬಂದಿಯನ್ನು ಖುಷಿಯಿಂದ ಮಾತನಾಡಿಸಿ ಜೈಲಿನಿಂದ ತೆರಳಿದರು ಎಂದು ಜೈಲು ಸಿಬ್ಬಂದಿ ತಿಳಿಸಿದ್ದಾರೆ.