Thursday, September 10, 2026

BDA Apartments

Home Front Page ಮೊದಲ ಹಂತದ ಹೋರಾಟ ಇಂದು ಅಂತ್ಯ: ಜನ ಕಾಂಗ್ರೆಸ್ ಧಿಕ್ಕರಿಲಿದ್ದಾರೆ- ಬಿವೈ ವಿಜಯೇಂದ್ರ

ಮೊದಲ ಹಂತದ ಹೋರಾಟ ಇಂದು ಅಂತ್ಯ: ಜನ ಕಾಂಗ್ರೆಸ್ ಧಿಕ್ಕರಿಲಿದ್ದಾರೆ- ಬಿವೈ ವಿಜಯೇಂದ್ರ

ಬಳ್ಳಾರಿ.ಸೆಪ್ಟಂಬರ್,10,2026 (www.justkannada.in):  ವಾಲ್ಮೀಕಿ ಅಭಿವೃದ್ದಿ ನಿಗಮ ಅಕ್ರಮ ಹಗರಣ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಬಳ್ಳಾರಿ ಚಲೋ ಪಾದಯಾತ್ರೆ ಇಂದು ಅಂತ್ಯವಾಗಲಿದೆ.

ರಾಜ್ಯ ಕಾಂಗ್ರೆಸ್‌ ಸರಕಾರದ ಆಡಳಿತ ವೈಫಲ್ಯಗಳನ್ನು ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಖಂಡಿಸಿ ಬಿಜೆಪಿ ಸೆಪ್ಟಂಬರ್ 1ರಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ ಆರಂಭಿಸಿದ್ದ 10 ದಿನಗಳ ‘ಬಳ್ಳಾರಿ ಚಲೋ’ಪಾದಯಾತ್ರೆ ಬಳ್ಳಾರಿಗೆ ತಲುಪಿದೆ, ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿಇಂದು  ಬೃಹತ್‌ ಸಮಾವೇಶ ನಡೆಯಲಿದ್ದು ಈ ಮೂಲಕ ಪಾದಯಾತ್ರೆ ಅಂತ್ಯವಾಗಲಿದೆ.

ಈ ಕುರಿತು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ನಮ್ಮ ಮೊದಲ ಹಂತದ ಹೋರಾಟ ಇಂದು ಅಂತ್ಯವಾಗಲಿದೆ.  ಮಧ್ಯಾಹ್ನ ಸಮಾವೇಶ ನಡೆಯಲಿದೆ. ಮುಂದಿನ 1.5 ವರ್ಷ ಕಾಂಗ್ರೆಸ್ ವಿರುದ್ದ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರವನ್ನ ಜನ ಧಿಕ್ಕರಿಸಲಿದ್ದಾರೆ ಎಂದು ನುಡಿದರು.

Key words: BJP, Ballari Chalo padayatra, B.Y. Vijayendra