Thursday, September 10, 2026

BDA Apartments

Home Front Page ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಎಸ್.ರವಿ ಉಪಾಧ್ಯಕ್ಷರಾಗಿ ಶರಣಗೌಡ ಬಯ್ಯಾಪುರ ಆಯ್ಕೆ- ಸಚಿವ ಲಕ್ಷ್ಮಣ್ ಸವದಿ

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಎಸ್.ರವಿ ಉಪಾಧ್ಯಕ್ಷರಾಗಿ ಶರಣಗೌಡ ಬಯ್ಯಾಪುರ ಆಯ್ಕೆ- ಸಚಿವ ಲಕ್ಷ್ಮಣ್ ಸವದಿ

ಬೆಂಗಳೂರು,ಸೆಪ್ಟಂಬರ್,10,2026 (www.justkannada.in): ಮೊದಲ ಎರಡುವರೆ ವರ್ಷಕ್ಕೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಎಸ್.ರವಿ, ಉಪಾಧ್ಯಕ್ಷರಾಗಿ ಶರಣಗೌಡ ಬಯ್ಯಾಪುರ ಆಯ್ಕೆ ಮಾಡುತ್ತೇವೆ ಎಂದು ಸಹಕಾರ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಲಕ್ಷ್ಮಣ್ ಸವದಿ, ಈಗ ನಾಮಪತ್ರ ಸಲ್ಲಿಸುತ್ತೇವೆ. ಅವಿರೋಧವಾಗಿ ಆಯ್ಕೆಯಾಗುತ್ತಾರೆ.  ಸಿಎಂ, ಡಿಸಿಎಂ ಹಾಗೂ ಸಿದ್ದರಾಮಯ್ಯ ಜೊತೆಗೂ ಚರ್ಚೆ ಆಗಿದೆ.  ಡಿಕೆ ಶಿವಕುಮಾರ್ ಎಲ್ಲರ ಜೊತೆಗೆ ಮಾತನಾಡಿದ್ದಾರೆ. ಎಲ್ಲಾ ನಿರ್ದೇಶಕರನ್ನ ಕರೆದು ವೈಯಕ್ತಿಕ ಅಭಿಪ್ರಾಯ  ಸಂಗ್ರಹಿಸಿದವು.  ನಾಲ್ವರು ಆಕಾಂಕ್ಷಿಗಳಿದ್ದರೂ ಇಬ್ಬರನ್ನು ಮಾತ್ರ ಆಯ್ಕೆ ಮಾಡಲು ಸಾಧ್ಯ.

ಹೀಗಾಗಿ ಮೊದಲ ಎರಡುವರೆ ವರ್ಷಕ್ಕೆ ಅಧ್ಯಕ್ಷರಾಗಿ ಎಸ್. ರವಿ   ಉಪಾಧ್ಯಕ್ಷರಾಗಿ ಶರಣಗೌಡ ಬಯ್ಯಾಫುರರನ್ನ ಆಯ್ಕೆ ಮಾಡುತ್ತೇವೆ.  ಯಾವುದೇ ತೊಂದರೆ ಇಲ್ಲ ಆತಂಕ ಇಲ್ಲ ಭಿನ್ನಾಭಿಪ್ರಾಯವಿಲ್ಲ ನಂತರದ ಎರಡುವವರೆ ವರ್ಷಗಳ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಅವತ್ತಿನ ದಿನದ ಸಂದರ್ಭಕ್ಕೆ ನೋಡಿಕೊಳ್ಳಲಾಗುತ್ತದೆ.  ಆನೇಕ ವರ್ಷಗಳಿಂದ ಬೆಳವಣಿಗೆಗಳು ಈಗೆ ಆಗಿದೆ . ನಾನು ಸಹಕಾರ ಸಚಿವ ಇದ್ದಾಗಲೇ ಅಧಿಕಾರ ಹಂಚಿಕೆಯೂ ಆಗಿದೆ ಎಂದು ಸಚಿವ ಲಕ್ಷ್ಮಣ್ ಸವದಿ ತಿಳಿಸಿದರು.

Key words: Apex Bank S. Ravi, Sharanagouda Bayyapura, Minister, Laxman Savadi