ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್: ಶ್ರೀಕಾಂತ್, ಸಿಂಧು ಫೈನಲ್’ಗೆ ಅರ್ಹತೆ

ಬ್ಯಾಂಕಾಕ್, ಜನವರಿ 26, 2021 (www.justkannada.in): ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್’ನಲ್ಲಿ ಭಾರತ ಶ್ರೀಕಾಂತ್, ಸಿಂಧು ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

ಬ್ಯಾಂಕಾಕ್‌ನಲ್ಲಿ ಜನವರಿ 27ರಿಂದ 31 ರವರೆಗೆ ನಡೆ ಯಲಿರುವ ಬಿಡಬ್ಲ್ಯೂಎಫ್ ಪಂದ್ಯಾವಳಿ ನಡೆಯಲಿದೆ.

ಪುರುಷರ ಡಬಲ್ಸ್ ತಂಡದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಮಿಶ್ರ ಡಬಲ್ಸ್ ಜೋಡಿ ಸಾತ್ವಿಕ್ ಮತ್ತು ಅಶ್ವಿನಿ ಪೊನ್ನಪ್ಪ ಅವರು ಸೆಮಿಫೈನಲ್ ತಲುಪಿದ್ದರೂ, ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಶ್ರೀಕಾಂತ್ ಹೆಚ್ಚು ಸಾಧನೆ ಮಾಡದಿದ್ದರೂ, ಕೊರೋನ ವೈರಸ್ ಸೋಂಕಿನ ಭಯದಿಂದಾಗಿ ಚೀನಾ ಮತ್ತು ಜಪಾನ್‌ನ ಶಟ್ಲರ್‌ಗಳು ಈ ಮೂರು ಈವೆಂಟ್‌ಗಳಿಂದ ಹೊರಬಂದ ಕಾರಣ ಶ್ರೀಕಾಂತ್‌ಗೆ ಅಗ್ರ-ಎಂಟರಲ್ಲಿ ಉಳಿಯಲು ಸಾಧ್ಯವಾಗಿದೆ.