ಅಯೋಧ್ಯೆಗೆ ಭೇಟಿ ನೀಡಿದ್ದ ಸೋನು ನಿಗಮ್ ಹೇಳಿದ್ದೇನು !?

ಅಯೋಧ್ಯೆ, ಜನವರಿ 26, 2021 (www.justkannada.in): ಅಯೋಧ್ಯೆಗೆ ಭೇಟಿ ನೀಡಿದ್ದ ಗಾಯಕ ಸೋನು ನಿಗಮ್ ‘ರಾಮ ಮಂದಿರ ಭಾರತದ ಹೃದಯ’ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಹಾಗೂ ಬಾಲಿವುಡ್ ನಿರ್ದೇಶಕ ಸಂದೀಪ್ ಸಿಂಗ್ ಜತೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದ ಸೋನು ನಿಗಮ್, ದೇಗುಲದಲ್ಲಿ ಸಂಜೆಯ ಆರತಿಯ ದರ್ಶನ ಪಡೆದರು.

ವರ್ಷಗಳಿಂದ ನಾನು ಅಯೋಧ್ಯೆಗೆ ಬರಬೇಕಿತ್ತು ಎಂದು ಬಯಸಿದ್ದೆ. ಇಂದು ಆಸೆ ಈಡೇರಿದೆ. ಅಯೋಧ್ಯೆ ಹಿಂದೂಗಳಿಗೆ ಅತ್ಯಂತ ಪೂಜ್ಯ ಸ್ಥಳವಾಗಿದೆ. ಅದು ‘ಭಾರತದ ಹೃದಯ’. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖುಷಿಯ ವಿಚಾರ ಎಂದಿದ್ದಾರೆ.