ಪೊಲೀಸರಿಗೆ ಸಿಕ್ಕ ಆತ್ಮಹತ್ಯೆಗೆ ಶರಣಾದ ನಟಿ ಜಯಶ್ರೀ ರಾಮಯ್ಯ ಪರ್ಸನಲ್ ಡೈರಿ

ಬೆಂಗಳೂರು, ಜನವರಿ 26, 2021 (www.justkannada.in): 

ಆತ್ಮಹತ್ಯೆಗೆ ಶರಣಾದ ನಟಿ ಜಯಶ್ರೀ ರಾಮಯ್ಯ ಅವರ ಖಾಸಗಿ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಜಯಶ್ರೀ ಸಾವಿನ ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಡೈರಿ ಸಿಕ್ಕಿದೆ. ಅದರಲ್ಲಿ ಸಾಕಷ್ಟು ವಿಚಾರಗಳಿವೆ ಎಂದು ಹೇಳಲಾಗಿದೆ.

ಡೈರಿ ಜೊತೆ ಡೆತ್ ನೋಟ್ ಸಹ ಇದೆ ಎನ್ನಲಾಗಿದೆ. ಇದರಲ್ಲಿ ಸಾಲು ಪಡೆದಿರುವವರಿಗೆ ಹಣ ವಾಪಸ್ ನೀಡಿ ಎಂದು ತಮ್ಮ ಸಹೋದರನಿಗೆ ತಿಳಿಸಲಾಗಿದೆ.

ಮನೆ ಬಾಡಿಗೆ, ವೈದ್ಯರ ಶುಲ್ಕ ಕೊಡುವಂತೆ ಕೋರಿದ್ದಾರೆ. ಯಾರ್ ಯಾರಿಗೆ ಹಣ ನೀಡಬೇಕು, ಯಾರ ಬಳಿ ಎಷ್ಟು ತೆಗೆದುಕೊಂಡಿದ್ದಾರೆ ಎಂದು ಬರೆದಿದ್ದಾರಂತೆ ಎನ್ನಲಾಗಿದೆ.