ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ದಿನಾಂಕ ಮುಂದೂಡಿಕೆ

ದುಬೈ, ಜನವರಿ 26, 2021 (www.justkannada.in): ಮೊದಲ ಆವೃತ್ತಿಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ 8 ದಿನ ಮುಂದೂಡಲಾಗಿದೆ.

ಭಾರತ ತಂಡ ಫೈನಲ್‌ನಲ್ಲಿ ಆಡುವ ಸಾಧ್ಯತೆ ದಟ್ಟವಾಗಿರುವುದರಿಂದ ಈ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.

ಸದ್ಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಯಾದಿಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್‌ ಮೊದಲೆರಡು ಸ್ಥಾನದಲ್ಲಿವೆ.

ಐತಿಹಾಸಿಕ ಲಾರ್ಡ್ಸ್‌ನಲ್ಲಿ ಈ ಮುಖಾಮುಖೀ ಜೂ. 18ರಿಂದ 22ರ ತನಕ ತನಕ ಸಾಗಲಿದೆ. ಜೂ. 23 ಮೀಸಲು ದಿನವಾಗಿದೆ.

ಈ ಮೊದಲು ನಿರ್ಧರಿಸಿದಂತೆ ಪ್ರಶಸ್ತಿ ಸಮರ ಜೂ. 10ರಿಂದ 14ರ ತನಕ ನಡೆಯಬೇಕಿತ್ತು.