“ಗಣರಾಜ್ಯೋತ್ಸವವು ಭಾರತೀಯರ ಪಾಲಿಗೆ ಸರ್ವಧರ್ಮಿಯರ ಹಬ್ಬದಂತೆ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಜನವರಿ,26,2021(www.justkannada.in) : ಭಾರತದಲ್ಲಿ ಗಣರಾಜ್ಯೋತ್ಸವವು ಯಾವ ಹಬ್ಬಕ್ಕಿಂತ ಕಡಿಮೆಯಿಲ್ಲ. ಜಾತಿ, ಮತ, ಧರ್ಮದ ಹೊರತಾಗಿಯೂ ಇಡೀ, ದೇಶವು ಸಂತೋಷದಿಂದ ಆಚರಿಸುವ ಹಬ್ಬವಾಗಿದೆ. ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ಸಾರುವ ದಿನವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.Republic Day,Indians,part,All,Religious,festival,Chancellor,Prof.G.Hemant Kumarಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಮಂಗಳವಾರ ಕ್ರಾಫರ್ಡ್ ಭವನದ ಆವರಣದಲ್ಲಿ ಆಯೋಜಿಸಿದ್ದ ಗಣರಾಜ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.

ಸಂವಿಧಾನದ ಮೂಲ ಉದ್ದೇಶ ದೇಶದ ನಾಗರಿಕರಲ್ಲಿ ಭ್ರಾತೃತ್ವ, ವ್ಯಕ್ತಿಯ ಘನತೆ, ರಾಷ್ಟ್ರದ ಏಕತೆಯನ್ನು ಮತ್ತು ರಾಷ್ಟ್ರದ ಸಮಗ್ರತೆಯನ್ನು ಉತ್ತೇಜಿಸುವುದಾಗಿದೆ. ಗಣರಾಜ್ಯೋತ್ಸವ ದಿನವನ್ನು ನಾವೆಲ್ಲರೂ ಉತ್ಸಾಹದಿಂದ ಆಚರಿಸಬೇಕಾಗುತ್ತದೆ. ಭಾರತವು ಪ್ರಜಾಪ್ರಭುತ್ವ ಮತ್ತು ನ್ಯಾಯಯುತ ರಾಷ್ಟ್ರವಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೆ ರಾಷ್ಟ್ರವನ್ನು ಮುನ್ನಡೆಸಲು ಅರ್ಹ ನಾಯಕನನ್ನು ಆಯ್ಕೆ ಮಾಡಲು ಅವಕಾಶ ನೀಡಿದೆ ಎಂದರು.Republic Day,Indians,part,All,Religious,festival,Chancellor,Prof.G.Hemant Kumarಈ ದೇಶದ ಪ್ರಜೆಯಾಗಿರುವುದಕ್ಕೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಸಂವಿಧಾನ ಜಾರಿಗೆ ಬಂದ ನಂತರ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವತಂತ್ರ್ಯ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರೆ ಎಲ್ಲಾ ಮೂಲಭೂತ ಅವಕಾಶಗಳು ಸಿಕ್ಕಿವೆ ಎಂದು ಸ್ಮರಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆ ಅಪಾರ
ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ್ದಂತಹ ಸಂವಿಧಾನವು ಜನವರಿ 26, 1950ರಂದು ಅಗೀಕಾರವಾದುದ್ದರಿಂದ ಈ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಸಂವಿಧಾನ ಶಿಲ್ಪಿ ಎಂದೇ ಖ್ಯಾತರಾದ ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆ ಅಪಾರ. ಈ ಸಂಗತಿಯನ್ನು ನಾವು ತಪ್ಪದೇ ನೆನೆದು ಅವರಿಗೆ ಕೃತಜ್ಞತೆ ಸಮರ್ಪಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.Republic Day,Indians,part,All,Religious,festival,Chancellor,Prof.G.Hemant Kumarಪ್ರತಿಯೊಬ್ಬ ನಾಗರಿಕನಿಗೆ ರಾಷ್ಟ್ರವನ್ನು ಮುನ್ನಡೆಸಲು ಅರ್ಹ ನಾಯಕನ್ನು ಆಯ್ಕೆ ಮಾಡಲು ಅವಕಾಶವಿದೆ. ಇಲ್ಲಿಯವರೆಗೆ, ಅನೇಕ ಸುಧಾರಣೆಗಳು ಕಂಡು ಬಂದರೂ, ನಿರುದ್ಯೋಗ, ಸಾಕ್ಷರತೆ ಕೊರತೆ, ಬಡತನ ಇಂದಿಗೂ ಜೀವಂತವಾಗಿವೆ. ಈ ರೀತಿಯ ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ಹುಟ್ಟುಹಾಕಬೇಕಾಗುತ್ತದೆ ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳ ಕೈಯಲ್ಲಿ, ದೇಶದ ಭವಿಷ್ಯ
ವಿದ್ಯಾರ್ಥಿಗಳ ಕೈಯಲ್ಲಿ, ದೇಶದ ಭವಿಷ್ಯವಿದೆ. ನಮ್ಮ ವಿಶ್ವವಿದ್ಯಾನಿಲಯವು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತಿದೆ. ನಮ್ಮ ಸ್ಥಾನವನ್ನು ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೇ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕ್ರೋಢಿಕರಿಸಲು ನಾವು ಶ್ರಮಿಸಬೇಕಿದೆ ಎಂದರು.

ವಿದೇಶದಲ್ಲಿರುವ ಅನೇಕ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ
ಸಂಶೋಧನೆ ಸಂಬಂಧಿಸಿದಂತೆ ವಿದೇಶದಲ್ಲಿರುವ ಅನೇಕ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕುವ ಪ್ರಕ್ರಿಯೆಯಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಸಕಾರಾತ್ಮಕ ಫಲಿತಾಂಶಗಗಳ ನಿರೀಕ್ಷೆಯಲ್ಲಿದ್ದೇವೆ. ಮೈಸೂರು ವಿವಿಯು ಅತ್ಯಂತ ಹಳೆಯ ವಿದ್ಯಾರ್ಥಿಗಳ ನೆಲೆಯನ್ನು ಹೊಂದಿದೆ. ಹಳೆಯ ವಿದ್ಯಾರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಶಿಖರವನ್ನು ತಲುಪಿದ್ದಾರೆ. ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂದು ಶ್ಲಾಘಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ-2020 ಸಕ್ರಿಯ ಜಾರಿ
ಕೇಂದ್ರ ಸರಕಾರವು ಜಾರಿಗೆ ತರಲಿರುವ ಏಕ ಶಿಕ್ಷಣ ನೀತಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ವಿಶ್ವವಿದ್ಯಾನಿಲಯದಲ್ಲಿ ಸಕ್ರಿಯವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ. ದೇಶವು ವೈಜ್ಞಾನಿಕ ಮತ್ತು ತಾಂತ್ರಿಕವಾಗಿ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಗಣರಾಜ್ಯವಾದ ನಂತರ ಭಾರತೀಯರು ಇತರೆ ದೇಶಗಳ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಸೇರಿದಂತೆ ವಿವಿಯ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

English summary….

Republic Day is like a all-religion festival for Indians: MoU VC
Mysuru, Jan. 26, 2021 (www.justkannada.in): “Republic Day in India is nothing less than a festival. Despite its diversity, the entire country celebrates it happily. It is a day that propagates unity in diversity,” opined Prof. G. Hemanth Kumar, Vice-Chancellor, University of Mysore.
He participated in the Republic Day program organised at the Crawford Hall premises, by the University of Mysore. He offered floral tributes to the portrait of Dr. B.R. Ambedkar and hoisted the tricolor. Republic Day,Indians,part,All,Religious,festival,Chancellor,Prof.G.Hemant Kumar
In his address later he explained that the main objective of our constitution is instilling brotherhood, respect for the dignity of an individual, national integrity, and unity. “We all should celebrate the Republic Day with enthusiasm. India is a democratic country and has allowed electing an efficient leader to lead us,” he said.
He explained the contribution of Dr. B.R. Ambedkar to the constitution of India and said that every citizen of the country must express gratitude.
Keywords: University of Mysore/ Prof. G. Hemanth Kumar/ Republic Day

key words : Republic Day-Indians-part-All-Religious-festival-Chancellor-Prof.G.Hemant Kumar