ಬೆಂಗಳೂರು,ಸೆಪ್ಟಂಬರ್,10,2026 (www.justkannada.in): ನಾನು ಸಿಎಂ ಆಗಿದ್ದಾಗಲೂ ಅಭಿವೃದ್ದಿ ಕೆಲಸ ಮಾಡಿದ್ದೇನೆ. ಈಗ ಡಿಕೆ ಶಿವಕುಮಾರ್ ಸಿಎಂ ಆಗಿ ಜನರ ಪರ ಕೆಲಸ ಮಾಡುತ್ತಿದ್ದಾರೆ. ನಾವು ಮಾಡಿದ ರೀತಿ ಬಿಜೆಪಿ ಜೆಡಿಎಸ್ ಜನಪರ ಕೆಲಸ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದರು.
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿರುವ ಸಿಎಂ ಡಿಕೆ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನೂರು ದಿನಗಳ ಸಂಭ್ರಮ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡು ಮಾತನಾಡಿದರು.
ನಮ್ಮ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ. ನಾವು ಗ್ಯಾರಂಟಿ ಜಾರಿ ಮಾಡಿದವು/. ನಾವು ಪಂಚ ಗ್ಯಾರಂಟಿ ಘೋಷಣೆ ಮಾಡುವಾಗ ಬಿಜೆಪಿಯವರು ಟೀಕಿಸಿದರು. ಜಾರಿ ಮಾಡಲು ಸಾಧ್ಯವಾಗಲ್ಲಎಂದರು. ರಾಜ್ಯದ ಅಭಿವೃದ್ದಿಗೆ ಹಣವಿರಲ್ಲ ಎಂದರು ನಾವು ಗ್ಯಾರಂಟಿ ಜಾರಿ ಮಾಡಿದವು, ಈಗ ಅದು ಜನರಿಗೆ ಅನುಕೂಲವಾಗುತ್ತಿದೆ ಎಂದರು.
100 ದಿನದಲ್ಲಿ ಏನು ಮಾಡಿದ್ದೀವಿ. ಏನು ಮಾಡಿಲ್ಲ. ಈ ಎಲ್ಲಾ ವಿಷಯಗಳ ಕೈಪಿಡಿ ಬಿಡುಗಡೆಯಾಗಿದೆ ಕೈಪಿಡಿಯಲ್ಲಿ ಸಾಧನೆಗಳನ್ನ ಜನತೆ ಮುಂದಿಟ್ಟಿದ್ದಾರೆ ಸರ್ಕಾರ ಜನರಿಗೆ ಉತ್ತರದಾಯಿತ್ವವಾಗಿರಬೇಕು. ಜನರಿಗೆ ಭರವಸೆ ಕೊಟ್ಟಿದ್ದವು ಅದು ಜಾರಿಯಾಗಿರುವುದು ಮುಖ್ಯ ಸಮಸಮಾಜವನ್ನ ನಿರ್ಮಾಣ ಮಾಡಬೇಕು. ಕೃಷಿ ಕ್ಷೇತ್ರದಲ್ಲಿ ಹೆಚ್ಚು ಉತ್ಪಾದನೆ ಮಾಡುವ ಕೆಲಸ ಮಾಡಬೇಕು ಎಂದರು.
ಸೆಪ್ಟಂಬರ್ 14ಕ್ಕೆ ನಮ್ಮ ಸರ್ಕಾರ 3 ವರ್ಷ ನಾಲ್ಕು ತಿಂಗಳು ಪೂರೈಸುತ್ತೆ . ಡಿಕೆಶಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಆಗಿದೆ. ಗ್ಯಾರಂಟಿ ಯೋಜನೆಗಳು ಸೇರಿ ಹಲವು ಜನಪರ ಯೋಜನೆ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಮಾತ್ರ ನುಡಿದಂತೆ ನಡೆದುಕೊಳ್ಳೋದು ಎಂದರು.
Key words: DK Shivakumar, Congress, 100Days Celebration– Former CM, Siddaramaiah







