‘ರಾಬರ್ಟ್’ ಟಾಲಿವುಡ್ ಪ್ರವೇಶಕ್ಕೆ ವಿಘ್ನ ! ಚಾಲೆಂಜಿಂಗ್ ಸ್ಟಾರ್ ಆಕ್ರೋಶ

ಬೆಂಗಳೂರು, ಜನವರಿ 29, 2020 (www.justkannada.in): ರಾಬರ್ಟ್ ಚಿತ್ರ ಮಾರ್ಚ್ 11ರಂದು ಬಿಡುಗಡೆ ಆಗಲಿದೆ.

ಈ ನಡುವೆ ದರ್ಶನ್ ಟಾಲಿವುಡ್ ಪ್ರವೇಶಕ್ಕೆ ವಿಘ್ನ ಉಂಟುಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಕಿಡಿಕಾರಿದ್ದಾರೆ.

ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಭಾಷೆಯಲ್ಲೂ ಈ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿತ್ತು. ಆದರೆ ಆಂಧ್ರಪ್ರದೇಶದಲ್ಲಿ ರಾಬರ್ಟ್ ಚಿತ್ರ ಬಿಡುಗಡೆಗೆ ಅಡ್ಡಿಯುಂಟಾಗಿದೆ.

ಈ ಸಂಬಂಧ ಕರ್ನಾಟಕ ವಾಣಿಜ್ಯ ಚಿತ್ರ ಮಂಡಳಿಗೆ ದೂರು ನೀಡಲು ನಿರ್ಧರಿಸಲಾಗಿದೆ.
ಕೆಜಿಎಫ್ ಯಶಸ್ಸಿನ ಹಿನ್ನೆಲೆಯಲ್ಲಿ ಕನ್ನಡ ಚಿತ್ರಗಳಿಂದ ತಮ್ಮ ಚಿತ್ರಗಳಿಗೆ ಅಡ್ಡಿಯುಂಟು ಮಾಡಲು ಪ್ರಯತ್ನಗಳು ನಡೆದಿದೆ ಎನ್ನಲಾಗಿದೆ. ರಾಬರ್ಟ್ ಚಿತ್ರಕ್ಕೆ ಬಂದ ಸಮಸ್ಯೆ ಕನ್ನಡದ ಇತರೆ ಚಿತ್ರಗಳಿಗೂ ಬರಬಹುದು.