Saturday, September 26, 2026

BDA Apartments

ಸ್ವಾತಂತ್ರ್ಯೋತ್ಸವಕ್ಕೆ ಅಲ್ಲು ಅರ್ಜುನ್-ರಶ್ಮಿಕಾ ನಟನೆಯ ‘ಪುಷ್ಪಾ’ ರಿಲೀಸ...
Home Cinema ಸ್ವಾತಂತ್ರ್ಯೋತ್ಸವಕ್ಕೆ ಅಲ್ಲು ಅರ್ಜುನ್-ರಶ್ಮಿಕಾ ನಟನೆಯ ‘ಪುಷ್ಪಾ’ ರಿಲೀಸ್

ಸ್ವಾತಂತ್ರ್ಯೋತ್ಸವಕ್ಕೆ ಅಲ್ಲು ಅರ್ಜುನ್-ರಶ್ಮಿಕಾ ನಟನೆಯ ‘ಪುಷ್ಪಾ’ ರಿಲೀಸ್

ಬೆಂಗಳೂರು, ಜನವರಿ 29, 2020 (www.justkannada.in): ನಟ ಅಲ್ಲು ಅರ್ಜುನ್ ಹಾಗೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪಾ’ ಚಿತ್ರ ಬಿಡುಗಡೆ ಘೋಷಣೆಯಾಗಿದೆ.

ಆಗಸ್ಟ್ 13ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ, ಮತ್ತು ಹಿಂದಿ ಭಾಷೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಘೋಷಿಸಿದೆ.

ಅಂದಹಾಗೆ ಖ್ಯಾತ ನಿರ್ದೇಶಕ ಸುಕುಮಾರ್ ಮತ್ತು ನಟ ಅಲ್ಲು ಅರ್ಜುನ್ ಕಾಂಬಿನೇಶನ್ ನಲ್ಲಿ ‘ಪುಷ್ಪಾ’ ಚಿತ್ರ ಮೂಡಿಬರುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಯ ಉಡುಗೊರೆಯಾಗಿ ಆಗಸ್ಟ್ ನಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದು, ಅಲ್ಲು ಅರ್ಜುನ್ ಜತೆಗೆ ರಶ್ಮಿಕಾ ಅಭಿಮಾನಿಗಳೂ ಕಾತರದಿಂದ ಕಾದಿದ್ದಾರೆ.