Monday, September 21, 2026

BDA Apartments

ತೆಲಂಗಾಣ ಚುನಾವಣೆ: ಆರಂಭದಲ್ಲೇ ‘ಕೈ’ ಮೇಲುಗೈ ! BDA JK_Adv BDA Adv
Home Front Page ತೆಲಂಗಾಣ ಚುನಾವಣೆ: ಆರಂಭದಲ್ಲೇ ‘ಕೈ’ ಮೇಲುಗೈ !

ತೆಲಂಗಾಣ ಚುನಾವಣೆ: ಆರಂಭದಲ್ಲೇ ‘ಕೈ’ ಮೇಲುಗೈ !

ಬೆಂಗಳೂರು, ಡಿಸೆಂಬರ್ 03, 2023 (www.justkannada.in): ತೆಲಂಗಾಣದಲ್ಲಿ ಮತ ಎಣಿಕೆ ಆರಂಭವಾಗುತ್ತಿದ್ದಂತೆ, ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿದೆ.

119 ಸ್ಥಾನಗಳನ್ನು ಹೊಂದಿರುವ ತೆಲಂಗಾಣದಲ್ಲಿ ಸದ್ಯ ಕಾಂಗ್ರೆಸ್ 70ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಬಿಎಸ್ ಆರ್ ಪಕ್ಷ 32 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಅಖಿಲ ಭಾರತ ಕಾಂಗ್ರೆಸ್ ವೀಕ್ಷಕ ಮಾಣಿಕ್ರಾವ್ ಠಾಕ್ರೆ ಅವರು ದೇಶದ ಅತ್ಯಂತ ಹಳೆಯ ಪಕ್ಷವು ದಕ್ಷಿಣ ರಾಜ್ಯದಲ್ಲಿ 70 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ರಾಜ್ಯದಲ್ಲಿ ನಡೆಸಿದ್ದರು. ಇದರ ಫಲಿತಾಂಶ ಚುನಾವಣೆಯಲ್ಲಿ ಸಿಗುತ್ತಿದೆ ಎಂದು ಅವರು ಹೇಳಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ 70 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಎಕ್ಸಿಟ್ ಪೋಲ್ಗಳು ಕೂಡ ಹೇಳಿದ್ದವು.