ಟೆಸ್ಟ್ ಕ್ರಿಕೆಟ್: ದಕ್ಷಿಣ ಆಫ್ರಿಕಾ 431 ರನ್’ಗೆ ಆಲ್’ಔಟ್, ಟೀಂ ಇಂಡಿಯಾಗೆ 71ರನ್ ಮುನ್ನಡೆ

ವಿಶಾಖಪಟ್ಟಣ, ಅಕ್ಟೋಬರ್ 5, 2019 (www.justkannada.in): ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 71 ರನ್ ಅಂತರದ ಮುನ್ನಡೆ ಸಾಧಿಸಿದೆ.

ಭಾರತದ 502 ರನ್‌ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಭರ್ಜರಿ ಆಟ ಪ್ರದರ್ಶಿಸಿದ್ದು, ಡೀನ್ ಎಲ್ಗರ್ (160) ಹಾಗೂ ಕ್ವಿಂಟನ್ ಡಿ ಕಾಕ್ (111) ಶತಕ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ (55) ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಕ್ಪೇಷಿರಿಸಿದೆ. ಈ ಮೂಲಕ ಭಾರತ 71 ರನ್ ಅಂತರದ ಮುನ್ನಡೆ ದಾಖಲಿಸಿದೆ.

ದಕ್ಷಿಣ ಆಫ್ರಿಕಾ 131.2 ಓವರ್‌ಗಳಲ್ಲಿ 431 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ 71 ರನ್‌ಗಳ ಮಹತ್ವದ ಮುನ್ನಡೆ ದಾಖಲಿಸಿತು. ಭಾರತದ ಪರ ಮಿಂಚಿದ ಅಶ್ವಿನ್ 145 ರನ್ ತೆತ್ತು ಏಳು ವಿಕೆಟ್ ಪಡೆದರು.