ಯುವದಸರಾ ವೇದಿಕೆಯಲ್ಲೇ ಎಂಗೇಜ್ ಮೆಂಟ್ ವಿಚಾರ: ತಪ್ಪಿತಸ್ಥರ ವಿರುದ್ದ ಕಾನೂನು ಚೌಕಟ್ಟಿನಲ್ಲಿ ಕ್ರಮ – ಸಚಿವ ವಿ.ಸೋಮಣ್ಣ…

ಮೈಸೂರು,ಅ,4,2019(www.justkannada.in):  ಮೈಸೂರು ದಸರಾ ಮಹೋತ್ಸವದ ಯುವ ದಸರಾ ಕಾರ್ಯಕ್ರಮದ ವೇದಿಕೆಯಲ್ಲೇ ಎಂಗೇಜ್ ಮೆಂಟ್ ಮಾಡಿಕೊಂಡ ರ್ಯಾಪರ್ ಚಂದನ್ ಶೆಟ್ಟಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡಗೆ ಇದೀಗ ಸಂಕಷ್ಟ ಎದುರಾಗಿದೆ.

ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಯುವ ದಸರಾ ವೇದಿಕೆ ಚಾಮುಂಡಿಶ್ವರಿಯ ದೇವರ ಸನ್ನಿಧಿ. ಆ ತಾಯಿಯ ಸನ್ನಿಧಿಯಲ್ಲಿ ಈ ರೀತಿಯ ನಡೆ ಸರಿಯಲ್ಲ.  ಇದು ಅಕ್ಷಮ್ಯ ಅಪರಾಧ. ಇನ್ನು ಆರು ತಿಂಗಳಲ್ಲಿ ಅವರಿಬ್ಬರಿಗೂ ಆ ತಾಯಿ ಚಾಮುಂಡೇಶ್ವರಿ ಶಿಕ್ಷೆ ನೀಡುತ್ತಾಳೆ ಎಂದು ಹೇಳಿದರು.

ಈ ರೀತಿ ಆಗುತ್ತೆ ಎಂದು ನಿರೀಕ್ಷಿಸಿರಲಿಲ್ಲ. ಇದು ಯುವ ದಸರಾ ಉಪಸಮಿತಿಯ ತಪ್ಪಲ್ಲ.  ಅವರಿಬ್ಬರ ವಿರುದ್ದ ಕಾನೂನು ಕ್ರಮಕ್ಕೆ ಪೋಲಿಸ್ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ. ಅವರಿಬ್ಬರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗುವುದು. ತಪ್ಪಿತಸ್ಥರ ವಿರುದ್ದ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದರು.

Key words: chandan shetty- nivedita gowda-Engagement – Yuvadasara stage-Minister -v. Somanna – legal action -against