ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಅಜಿಂಕ್ಯಾ ರಹಾನೆಗೆ ಗುಡ್ ನ್ಯೂಸ್ !

ಬೆಂಗಳೂರು, ಅಕ್ಟೋಬರ್ 5, 2019 (www.justkannada.in): ದ.ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯವಾಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಅಜಿಂಕ್ಯಾ ರೆಹಾನೆಗೆ ಗುಡ್ ನ್ಯೂಸ್ ಸಿಕ್ಕಿದೆ. ರೆಹಾನೆ ಪತ್ನಿ ರಾಧಿಕಾ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ.

ಅಜಿಂಕ್ಯಾ ರೆಹಾನೆ ಮತ್ತು ಪತ್ನಿ ರಾಧಿಕಾ 2014 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಈಗ ಮೊದಲ ಮಗುವಿಗೆ ಪೋಷಕರಾದ ಸಂಭ್ರಮ. ರೆಹಾನೆ ದಂಪತಿಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವಿಟರ್ ಮೂಲಕ ಶುಭ ಹಾರೈಸಿದ್ದಾರೆ.