ಹಾರ್ದಿಕ್ ಪಾಂಡ್ಯಗೆ ಲಂಡನ್’ನಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ

ಬೆಂಗಳೂರು, ಅಕ್ಟೋಬರ್ 5, 2019 (www.justkannada.in): 
ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬೆನ್ನು ನೋವಿನಿಂದ ಬಳಲುತ್ತಿದ್ದು, ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಸದ್ಯ ಹಾರ್ದಿಕ್ ಪಾಂಡ್ಯ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿ ಬಗ್ಗೆ ಫೋಟೋವೊಂದನ್ನ ಪೋಸ್ಟ್ ಮಾಡೋ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಶಸ್ತ್ರಚಿಕಿತ್ಸೆ ಯಶಸ್ವಿಗಾಗಿ ಶುಭಕೋರಿದ ನನ್ನ ಎಲ್ಲಾ ಬಂಧು ಮಿತ್ರರಿಗೆ ಧನ್ಯವಾದಗಳು. ಶೀಘ್ರದಲ್ಲೇ ಭಾರತಕ್ಕೆ ಹಿಂತಿರುಗುತ್ತೇನೆ! ಅಲ್ಲಿಯವರೆಗೆ ನನ್ನನ್ನು ನೆನಪಿಡಿ ಎಂದು ಬರೆದುಕೊಂಡಿದ್ದಾರೆ.