Friday, August 7, 2026

BDA Apartments

Home Front Page ತಮಿಳುನಾಡಿನಲ್ಲಿ ಯಾರಿಂದ ಸರ್ಕಾರ ರಚನೆ ಕಾಲವೇ ನಿರ್ಣಯಿಸುತ್ತೆ- ಬಿ.ಎಲ್ ಸಂತೋಷ್

ತಮಿಳುನಾಡಿನಲ್ಲಿ ಯಾರಿಂದ ಸರ್ಕಾರ ರಚನೆ ಕಾಲವೇ ನಿರ್ಣಯಿಸುತ್ತೆ- ಬಿ.ಎಲ್ ಸಂತೋಷ್

ನವದೆಹಲಿ,ಮೇ,8,2026 (www.justkannada.in): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ 108 ಕ್ಷೇತ್ರಗಳಲ್ಲಿ ಗೆದ್ದು ಬಹುದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಬಹುಮತವಿಲ್ಲದ ಕಾರಣ ಸರ್ಕಾರ ರಚಿಸಲು ತೀವ್ರ ಕಸರತ್ತು ನಡೆಸುತ್ತಿದೆ. ಈ ಮಧ್ಯೆ ಡಿಎಂಕೆ ಮೈತ್ರಿ ಕಡೆದುಕೊಂಡು ಕಾಂಗ್ರೆಸ್ ಟಿವಿಕೆಯನ್ನ ಬೆಂಬಲಿಸಿದ್ದು, ಬಹುಮತ ಸಾಬೀತುಮಾಡವಂತೆ  ರಾಜ್ಯಪಾಲರು ಸೂಚನೆ ನೀಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಸಂತೋಷ್ ಮಾಡಿರುವ ಟ್ವೀಟ್ ವೊಂದು ಬಹಳ ಕುತೂಹಲ ಕೆರಳಿಸಿದೆ. ತಮಿಳುನಾಡಿನಲ್ಲಿ ಯಾರು ಸರ್ಕಾರ ರಚನೆ ಮಾಡುತ್ತಾರೆ ಎಂಬುದನ್ನು ಕಾಲವೇ ನಿರ್ಣಯಿಸುತ್ತದೆ. ಆದರೆ ಒಂದು ವಿಚಾರವಂತೂ ಸ್ಪಷ್ಟ. ಕೊನೆಯಲ್ಲಿ ಕಾಂಗ್ರೆಸ್ ಮುಖಕ್ಕೆ ಮೊಟ್ಟೆಯಲ್ಲಿ ಹೊಡೆಸಿಕೊಂಡಂತಾಗುತ್ತದೆ ಎಂದು ಕಾಂಗ್ರೆಸ್ ಗೆ ಬಿಎಲ್ ಸಂತೋಷ್ ಕುಟುಕಿದ್ದಾರೆ.

ಟಿವಿಕೆ ಸರ್ಕಾರ ರಚನೆಗೆ ಹೆಣಗಾಡುತ್ತಿದ್ದರೆ  ಮತ್ತೊಂದೆಡೆ ಡಿಎಂಕೆ-ಎಐಎಡಿಎಂಕೆ ಪಕ್ಷಗಳು ಮೈತ್ರಿಯೊಂದಿಗೆ ಸರ್ಕಾರ ರಚನೆಗೆ ಯತ್ನ ನಡೆಸಿವೆ ಎಂಬ ವದಂತಿಗಳು ಹಬ್ಬಿವೆ. ಒಟ್ಟಾರೆಯಾಗಿ ತಮಿಳುನಾಡಿನಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Key words: form, government, Tamil Nadu, B.L. Satosh