Monday, August 24, 2026

BDA Apartments

Home Crime ತಹಶೀಲ್ದಾರ್ ಮನೆಗೆ ನುಗ್ಗಿ ಹಲ್ಲೆ, ದರೋಡೆ ಹಾಗೂ 10 ಲಕ್ಷ ರೂ.ಗೆ ಬೆದರಿಕೆ ಆರೋಪ: ಕೇಸ್...

ತಹಶೀಲ್ದಾರ್ ಮನೆಗೆ ನುಗ್ಗಿ ಹಲ್ಲೆ, ದರೋಡೆ ಹಾಗೂ 10 ಲಕ್ಷ ರೂ.ಗೆ ಬೆದರಿಕೆ ಆರೋಪ: ಕೇಸ್ ದಾಖಲು

ರಾಮನಗರ,ಜುಲೈ,8,2026 (www.justkannada.in): ತಹಶೀಲ್ದಾರ್ ಮನೆಗೆ ನುಗ್ಗಿ ಹಲ್ಲೆ ನಡೆಸಿ ದರೋಡೆ ಮಾಡಿ ಹಾಗೂ 10 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.

ಚನ್ನಪಟ್ಟಣದ ತಹಶೀಲ್ದಾರ್ ನೀಡಿದ ದೂರಿನ ಮೇರೆಗೆ, ಅನುಷ್  ಶಿವಪ್ಪ ಹಾಗೂ ಆತನ ಇಬ್ಬರು ಸಹಚರರಾದ ಶೋಭರಾಜ್ ಮತ್ತು ನವೀನ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.

ಪರಿಚಯದ ನೆಪದಲ್ಲಿ ಜೂನ್ 29ರ ಮುಂಜಾನೆ ತಹಶೀಲ್ದಾರ್ ಅವರ ಸರ್ಕಾರಿ ನಿವಾಸಕ್ಕೆ ಬಂದ ಆರೋಪಿಗಳು, ಮದ್ಯ ಸೇವನೆ ನಡೆಸಿ ಜ್ಯೂಸ್ ಕುಡಿಸಿದ ಬಳಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಅವರನ್ನು ವಿವಸ್ತ್ರಗೊಳಿಸಿ, ಚಿನ್ನದ ಉಂಗುರ, ಚಿನ್ನದ ಸರ ಹಾಗೂ ಬೆಳ್ಳಿ ಉಡುದಾರವನ್ನು ಕಸಿದುಕೊಂಡು 10 ಲಕ್ಷ ರೂ. ಹಣ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿರುವುದಾಗಿ ಹಾಗೂ ನಗ್ನ ವಿಡಿಯೊ ಚಿತ್ರೀಕರಿಸಿ ಅದನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ.

ಗಾಯಗೊಂಡ ತಹಶೀಲ್ದಾರ್ ಚಿಕಿತ್ಸೆ ಪಡೆದು ಬಳಿಕ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Key words: Tahsildar, house, assault, robbery, threat