Sunday, August 23, 2026

BDA Apartments

Home Front Page ಪರಿಹಾರ ಘೋಷಣೆ ನಮ್ಮ ಜವಾಬ್ದಾರಿ ಅಲ್ಲ, ಕೇಂದ್ರ ಸರ್ಕಾರದ್ದು- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಪರಿಹಾರ ಘೋಷಣೆ ನಮ್ಮ ಜವಾಬ್ದಾರಿ ಅಲ್ಲ, ಕೇಂದ್ರ ಸರ್ಕಾರದ್ದು- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜುಲೈ,8,2026 (www.justkannada.in): ಬರ ಪರಿಹಾರ ಘೋಷಣೆಗೆ ಒತ್ತಾಯ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬರ ಪರಿಹಾರ ಘೋಷಣೆ ನಮ್ಮ ಜವಾಬ್ದಾರಿ ಅಲ್ಲ ಕೇಂದ್ರ ಸರ್ಕಾರದ್ದು  ವರದಿ ಕೊಡುವುದು ನಮ್ಮ ಜವಾಬ್ದಾರಿ. ನಿನ್ನ ಸಿಎಂ ಡಿಕೆ ಶಿವಕುಮಾರ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ವರದಿ ಸಲ್ಲಿಸಬೇಕು ಎಂದರು.

ಈಗ ಬಿತ್ತನೆ ಪ್ರಾರಂಭ ಆಗಿದೆ ಕೆಲವು ಕಡೆ ಆಗಿಲ್ಲ. ಬಿತ್ತನೆ ಮೇವು ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ವರದಿ  ನೀಡಬೇಕು. ಸ್ಥಳ ಪರಿಶೀಲನೆ ಮಾಡಿ ಕೇಂದ್ರಕ್ಕೆ ವರದಿ ಕಳುಹಿಸಬೇಕು ವರದಿ ಕಳಿಸಿದ ನಂತರ ಕೇಂದ್ರ ಸರ್ಕಾರದವರು ತಂಡ ಕಳಿಸುತ್ತಾರೆ.  ಜಿಲ್ಲೆ ತಾಲ್ಲೂಕುಗಳಲ್ಲಿ ಪರಿಶೀಲಿಸಿ ವರದಿ ನೀಡಲಾಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

Key words:  Drought relief. Responsibility, central government, Home Minister, Priyank Kharge