Saturday, August 22, 2026

BDA Apartments

Home Front Page  SIR: ಕಾಂಗ್ರೆಸ್ ನಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅಧಿಕಾರ ದುರ್ಬಳಕೆ- ಬಿವೈ ವಿಜಯೇಂದ್ರ

 SIR: ಕಾಂಗ್ರೆಸ್ ನಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅಧಿಕಾರ ದುರ್ಬಳಕೆ- ಬಿವೈ ವಿಜಯೇಂದ್ರ

ಚಿತ್ರದುರ್ಗ,ಜುಲೈ,8,2026 (www.justkannada.in):  ಎಸ್ ಐಆರ್ ಪ್ರಕ್ರಿಯೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ರಾಜ್ಯ ಸರ್ಕಾರದಿಂದ ವ್ಯವಸ್ಥೆಯನ್ನ ಬುಡಮೇಲು ಮಾಡುವ ಕೆಲಸವಾಗುತ್ತಿದೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅಧಿಕಾರ ದುರ್ಬಳಕೆ ಮಾಡುತ್ತಿದೆ ಅಧಿಕಾರಿಗಳು ಮಸೀದಿಯಲ್ಲಿ ಕುಳಿತು ಎಸ್ ಐಆರ್ ಮಾಡುತ್ತಿದ್ದಾರೆ ಹುಳುಕು ಮುಚ್ಚಿಕೊಳ್ಳಲು ಆಯೋಗದ ಮೇಲೆ ದೂರುವುದು ಸರಿಯಲ್ಲ.  ಮಾನ ಮರ್ಯಾದೆ ಇದ್ದರೇ ಆಯೋಗದ ಮೇಲೆ ವಿಶ್ವಾಸವಿಡಲಿ.  ಚುನಾವಣಾ ಆಯೋಗಕ್ಕೆ ಸರ್ಕಾರ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಸಿಎಂ ಡಿಕೆಶಿ  ದಿನನಿತ್ಯ ಜಾಹೀರಾತು ಕೊಡುತ್ತಿದ್ದಾರೆ.  ಕೇಂದ್ರದ ಮೇಲೆ ದೂರುವುದು ಬಿಟ್ಟರೇ ಬೇರೆನೂ ಕೆಲಸ ಮಾಡುತ್ತಿಲ್ಲ  ಸಿಎಂ ಡಿಕೆಶಿ ಕೇವಲ ಮೊಸಳೆ ಕಣ್ಣೀರು ಹಾಕುತ್ತಾರೋ?  ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಾರೋ ನೋಡುತ್ತೇವೆ. ಸದನದಲ್ಲಿ ರೈತರ ಸಮಸ್ಯೆ ಬಗ್ಗೆ ನಾವು ಚರ್ಚಿಸುತ್ತೇವೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.

ಅಡ್ಡಮತದಾನ ವಿಚಾರ ವರಿಷ್ಠರ ಗಮನಕ್ಕೆ ತರಲಾಗಿದೆ. ವರಿಷ್ಠರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

Key words: Congress, Government, SIR,  power, officials , BY Vijayendra