Monday, September 21, 2026

BDA Apartments

ಕಬ್ಬಿನ ದರ ನಿಗದಿ: ಕೇಂದ್ರದತ್ತ ಬೊಟ್ಟು ಮಾಡೋದು ಸರಿಯಲ್ಲ- ಹೆಚ್.ಡಿಕೆ BDA JK_Adv BDA Adv
Home Front Page ಕಬ್ಬಿನ ದರ ನಿಗದಿ: ಕೇಂದ್ರದತ್ತ ಬೊಟ್ಟು ಮಾಡೋದು ಸರಿಯಲ್ಲ- ಹೆಚ್.ಡಿಕೆ

ಕಬ್ಬಿನ ದರ ನಿಗದಿ: ಕೇಂದ್ರದತ್ತ ಬೊಟ್ಟು ಮಾಡೋದು ಸರಿಯಲ್ಲ- ಹೆಚ್.ಡಿಕೆ

ಮೈಸೂರು,ನವೆಂಬರ್,7,2025 (www.justkannada.in): ಕೇಂದ್ರ ಸರ್ಕಾರ ಈಗಾಗಲೇ ಎಫ್ ಆರ್ ಪಿ ದರ ನಿಗದಿ ಮಾಡಿದೆ. ಹೀಗಾಗಿ ಕಬ್ಬಿನ ದರ ನಿಗದಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಕೇಂದ್ರದತ್ತ ಬೊಟ್ಟು ಮಾಡೋದು ಸರಿಯಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ರೈತರಿಗೆ ಈ ಸರ್ಕಾರದ ಬಗ್ಗೆ ಆಕ್ರೋಶವಿದೆ. ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತಿದ್ದಾರೆ ಗೊತ್ತಿಲ್ಲ. ಸಿದ್ದರಾಮಯ್ಯ ಸೀನಿಯರ್ ಲೀಡರ್ ಇದ್ದಾರೆ. ಎರಡು ಬಾರಿ ಸಿಎಂ ಆಗಿದ್ದಾರೆ. ಡಿಸಿಎಂ ಆಗಿದ್ದರು. ಸಿದ್ದರಾಮಯ್ಯ ಹೆಚ್ಚು ಬಜೆಟ್ ಮಂಡನೆ ಮಾಡಿದ ಖ್ಯಾತಿ ಇದೆ. ಸಿಎಂಗೆ ಕನಿಷ್ಠ ಏನು ತೀರ್ಮಾನ ಮಾಡಬೇಕು ಅಂತ ಗೊತ್ತಿಲ್ವಾ. ವಿರೋಧ ಪಕ್ಷದ ಪ್ರಮುಖರಿಗೆ ಆಹ್ವಾನ ಇದೆ. ಮೀಟಿಂಗ್ ಕರೆದಿದ್ದಾರೆ ಅಂತೆ. ಇದು ನಾವು ಮಾಡುವ ತೀರ್ಮಾನ ಅಲ್ಲ.ಸಿಎಂ ಮಾಡುವ ತೀರ್ಮಾನ. ಸಣ್ಣ ವಿಷಯವನ್ನು ದೊಡ್ಡದು ಮಾಡಿದ್ದಾರೆ. ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಬೇಕು ಎನ್ನುತ್ತಾರೆ. ಯಾವ ರಾಜ್ಯದಲ್ಲಿ ಸಿಎಂ ಗಳು ಪ್ರಧಾನಿಗೆ ಪತ್ರ ಬರೆಯುತ್ತಿದ್ದಾರೆ. ಸಿದ್ದರಾಮಯ್ಯಗೆ ರೈತರ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಇದೆ. ನಾನೇ ಎರಡು ಬಾರಿ ಆಕಸ್ಮಿಕವಾಗಿ ಸಿಎಂ ಆಗಿದ್ದೆ. ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದೆ. ಎರಡು ಸಂದರ್ಭದಲ್ಲೂ ಕಬ್ಬು ಬೆಳಗಗಾರರ ಸಮಸ್ಯೆಗಳನ್ನು ನಾನೇ ಬಗೆಹರಿಸಿದ್ದೇನೆ. ಕೇಂದ್ರದ ಕಡೆ ನೋಡಲಿಲ್ಲ. ವೈಯಕ್ತಿಕ ನಿರ್ಧಾರ ಮಾಡಿದ್ದೆ ಎಂದರು.

3 ಪಕ್ಷಗಳಲ್ಲಿ ಸಕ್ಕರೆ ಮಾಲೀಕರಿದ್ದಾರೆ ಅನ್ನುವ ಆರೋಪವಿದೆ. ನಮ್ಮ ಪಕ್ಷದಲ್ಲಿ ಬಂಡಪ್ಪ ಕಾಶಪ್ಪನವರ್ ಕಾರ್ಖಾನೆ ಇಟ್ಟುಕೊಂಡಿದ್ದರು. ಈಗ ಅವರು ಮಾರಾಟ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಯಾರು ಸಕ್ಕರೆ ಕಾರ್ಖಾನೆ ಮಾಲೀಕರು ಇಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಇವರ ತಪ್ಪಿಗೆ ಪ್ರಧಾನಿಯನ್ನು ಇಕ್ಕಟಿಗೆ ಸಿಲುಕಿಸುವ ತಂತ್ರ ಮಾಡಿದ್ದಾರೆ. ಅದಕ್ಕೆ ಪತ್ರ ಬರೆದಿದ್ದಾರೆ ಅಷ್ಟೇ. ಕೇಂದ್ರ ಸರ್ಕಾರ ಈಗಾಗಲೇ ಎಫ್.ಆರ್. ಪಿ ದರ ನಿಗದಿ ಮಾಡಿದೆ. ಸಿದ್ದರಾಮಯ್ಯ ಅವರು ರೈತರು ಹಾಗೂ ಕಾರ್ಖಾನೆ ಮಾಲೀಕರ ಜೊತೆ ಮೀಟಿಂಗ್ ಮಾಡಿದ್ರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಹಣದ ಕೊರತೆ ಇದ್ದರೆ ನನ್ನ ಸರ್ಕಾರದಲ್ಲಿ ಹಣದ ಕೊರತೆ ಇದೆ ಅಂತ ಸಿಎಂ ಹೇಳಬೇಕು. ಅದನ್ನು ಬಿಟ್ಟು ಕೇಂದ್ರದ ಕಡೆ ಬೊಟ್ಟು ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು.

ಗ್ಯಾರೆಂಟಿ ಸ್ಕೀಮ್ ಉಸ್ತುವಾರಿ ನೋಡಿಕೊಳ್ಳಲು ಕ್ಯಾಬಿನೆಟ್ ಮಟ್ಟದ ಸ್ಥಾನಮಾನ ಕೊಟ್ಟು ದುಡ್ಡು ವೆಚ್ಚ ಮಾಡುತ್ತೀರಾ. ರೈತರಿಗೆ ಕೊಡಲು ಆಗಲ್ಲವೇ. ರೈತರ ಬಗ್ಗೆ ಅಸಡ್ಡೆ ಕೆಲ ಒತ್ತಡಕ್ಕೆ ಮಣಿದಿರಬಹುದು. ಜನಪ್ರತಿನಿಧಿಗಳ ಕಾರ್ಖಾನೆ ಉಳಿಸುವ ಒತ್ತಡ ಇರಬಹುದು ಎಂದರು.

ನವೆಂಬರ್ ನಲ್ಲಿ ಕ್ರಾಂತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್ ಡಿಕೆ, ಇಲ್ಲಿ ಕ್ರಾಂತಿನೂ ಆಗಲ್ಲ ವಾಂತಿನು ಆಗಲ್ಲ. ಯಾವ ಕ್ರಾಂತಿನು ಆಗಲ್ಲ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹೈಕಮಾಂಡ್  ಅವರೇನು ಮಾತನಾಡಿಕೊಂಡಿದ್ದಾರೆ ನನಗೆ ಗೊತ್ತಿಲ್ಲ . ಜನ 136 ಸೀಟು ಕೊಟ್ಟರು. ಹಿಂದಿನ ಸರ್ಕಾರದ ತಪ್ಪು ಸರಿ ಮಾಡಿ ಅಂತ ಅಧಿಕಾರ ಕೊಟ್ಟರು. ಈಗ ಇವರಿಗಿಂತ ಹಿಂದಿನ ಸರ್ಕಾರವೇ ಸರಿಯಿತ್ತು ಅಂತಿದ್ದಾರೆ ಎಂದು ಹೇಳಿದರು.

ಮೈಸೂರಿನಲ್ಲಿ ಹುಲಿ ದಾಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್ ಡಿಕೆ, ಈ ಸರ್ಕಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ. ಅವರು ತಾನೇ ಏನು ಮಾಡುತ್ತಾರೆ. ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಮೊದಲು ಪ್ರಾಣಿಗಳನ್ನು ಹಿಡಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಿ . ರೈತರ ಜೀವ ಕಾಪಾಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  ಆಗ್ರಹಿಸಿದರು.

Key words: Sugarcane, price fixing, HDK, CM Siddaramaiah