Sunday, September 20, 2026

BDA Apartments

ಪವರ್ ಸ್ಟಾರ್ ಅಪ್ಪು ಕುರಿತು ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಮಾತು… BDA JK_Adv B...
Home Cinema ಪವರ್ ಸ್ಟಾರ್ ಅಪ್ಪು ಕುರಿತು ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಮಾತು…

ಪವರ್ ಸ್ಟಾರ್ ಅಪ್ಪು ಕುರಿತು ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಮಾತು…

ಬೆಂಗಳೂರು, ಡಿಸೆಂಬರ್ 16, 2021 (www.justkannada.in): ಪುನೀತ್‌ ರಾಜ್‌ಕುಮಾರ್‌ ಅವರನ್ನು ನೆನಪಿಸಿಕೊಂಡಿರುವ ಅಲ್ಲು ಅರ್ಜುನ್, ಸಿನಿಮಾ ಕೆಲಸಗಳಲ್ಲಿ ತೊಡಗಿದ್ದರಿಂದ ಪುನೀತ್‌ ಮನೆಗೆ ಭೇಟಿ ನೀಡಲು ಆಗಿಲ್ಲ ಎಂದಿದ್ದಾರೆ.

ಪುಷ್ಪ ಚಿತ್ರದ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದ ಅಲ್ಲು ಅರ್ಜುನ್‌ ಸಾಕಷ್ಟು ಮಾತನಾಡಿದ್ದಾರೆ. ಕರ್ನಾಟಕ, ಅದರಲ್ಲೂ ಬೆಂಗಳೂರಿನ ಜನ ತೋರುತ್ತಿರುವ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ.

ತಮ್ಮ ಮಾತಿನ ನಡುವೆ ಅಪ್ಪು ನೆನಪು ಮಾಡಿಕೊಂಡ ಸ್ಟೈಲಿಷ್ ಸ್ಟಾರ್, ಸದ್ಯ ನಾನು”ಪುಷ್ಪ’ ಸಿನಿಮಾದ ಪ್ರಚಾರಕ್ಕೆ ಬಂದಿರೋದು. ಈ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ ಎಂದರು.

ಸಿನಿಮಾ ಬಿಡುಗಡೆಯಾದ ನಂತರ ಪುನೀತ್‌ ಅವರ ಕುಟುಂಬದ ಭೇಟಿಗೆಂದೇ ಬೆಂಗಳೂರಿಗೆ ಬರುತ್ತೇನೆ. ಅವರ ಕುಟುಂಬವನ್ನು ಭೇಟಿ ಮಾಡವುದಾಗಿ ತಿಳಿಸಿದರು.