Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Crime ಬಿಎಂಟಿಸಿ ಬಸ್ ಗೆ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಬಲಿ.

ಬಿಎಂಟಿಸಿ ಬಸ್ ಗೆ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಬಲಿ.

ಬೆಂಗಳೂರು,ಫೆಬ್ರವರಿ,2,2024(www.justkannada.in):  ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಬಿಎಂಟಿಸಿ ಬಸ್ ಗೆ ಬಲಿಯಾಗಿರುವ ಘಟನೆ ಬೆಂಗಳೂರಿನ ಹರಿಶ್ಚಂದ್ರ ಘಾಟ್ ಬಳಿ ನಡೆದಿದೆ.

ಕುಸುಮಿತ (21) ಮೃತಪಟ್ಟ  ವಿದ್ಯಾರ್ಥಿನಿ. ಕುಸುಮಿತ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಬೆಳಿಗ್ಗೆ 8.30ರ ವೇಳೆ ಈ ಘಟನೆ ನಡೆದಿದೆ.ಬಿಎಂಟಿಸಿ ಬಸ್ ಗೆ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಬಲಿ kusumitha

ಕುಸುಮಿತ  ಕಾಲೇಜಿಗೆಂದು ತೆರಳುತ್ತಿದ್ದಾಗ ಮೆಟ್ರೋ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿದ್ದಳು. ನಂತರ ಬೈಕ್ ಹಿಂತೆಗೆದುಕೊಳ್ಳುತಿದ್ದ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬರುತ್ತಿದ್ದ ಬಿಎಂಟಿಸಿ ಬಸ್ ಹಿಂಬದಿ ಚಕ್ರಕ್ಕೆ ಬೈಕ್ ತಾಗಿ ಆಕೆ ಮೇಲೆ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದಳು. ಗಾಯಗೊಂಡ ಆಕೆಯನ್ನ ತಕ್ಷಣ ಆಸ್ಪತ್ರೆಗೆ ರವಾನಿಸುತ್ತಿರುವಾಗ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾಳೆ.

ಘಟನೆ ಕುರಿತು ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  student – college –accident- BMTC bus –death