Thursday, August 13, 2026

BDA Apartments

Home Front Page ಮಾಜಿ ಸಿಎಂ ಹೆಚ್.ಡಿಕೆಯಿಂದ ನಾನು ಲೀಡರ್ ಆಗಿಲ್ಲ- ಸಚಿವ ಚಲುವರಾಯಸ್ವಾಮಿ ಕೆಂಡಾಮಂಡಲ.

ಮಾಜಿ ಸಿಎಂ ಹೆಚ್.ಡಿಕೆಯಿಂದ ನಾನು ಲೀಡರ್ ಆಗಿಲ್ಲ- ಸಚಿವ ಚಲುವರಾಯಸ್ವಾಮಿ ಕೆಂಡಾಮಂಡಲ.

ಮಂಡ್ಯ,ಫೆಬ್ರವರಿ,2,2024(www.justkannada.in):  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯಿಂದ ನಾನು ಲೀಡರ್ ಆಗಿಲ್ಲ. ಅವರಿಂದ ವಿನಯತೆ ಹೇಳಿಸಿಕೊಳ್ಳುವ ಅಗತ್ಯ ನನಗಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ದೇವೇಗೌಡರ ಮೇಲಿನ ಗೌರವಕ್ಕಾಗಿ ಸುಮ್ಮನಿದ್ದೇವೆ.  ದೇವೇಗೌಡರ ಹೆಸರು ಅವರ ಜೊತೆ ಇಲ್ಲದಿದ್ದರೇ ಅದರ ಅಪ್ಪನಂಗೆ ಕುಮಾರಸ್ವಾಮಿಗೆ ಉತ್ತರಿಸುತ್ತಿದ್ದೆ ಎಂದು ಕಿಡಿಕಾರಿದರು.

ನಾನೇನು ಕುಮಾರಸ್ವಾಮಿ ಋಣದಲ್ಲಿದ್ದೀನಾ..? ಕುಮಾರಸ್ವಾಮಿ ಅವರ ವಿಚಾರವೇ ಪ್ರಸ್ತುತವಲ್ಲ. ನಾಚಿಕೆ ಆಗಬೇಕು ಅವರಿಗೆ. ಯಾವ ಸಾಧನೆಗಾಗಿ ಮಂಡ್ಯ ಬಂದ್ ಮಾಡುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Key words: not been – leader since -former CM -HDK- Minister -Chaluvarayaswamy