Tuesday, September 29, 2026

BDA Apartments

ಡಿಕೆಶಿ ಕರ್ನಾಟಕದ ಜನಕ್ಕಾಗಿ ಅಲ್ಲ, ಪಕ್ಷಕ್ಕಾಗಿ ಮಾತ್ರ ದೆಹಲಿಗೆ ಹೋಗ್ತಾರೆ-...
Home Front Page ಡಿಕೆಶಿ ಕರ್ನಾಟಕದ ಜನಕ್ಕಾಗಿ ಅಲ್ಲ, ಪಕ್ಷಕ್ಕಾಗಿ ಮಾತ್ರ ದೆಹಲಿಗೆ ಹೋಗ್ತಾರೆ-ಆರ್.ಅಶೊಕ್

ಡಿಕೆಶಿ ಕರ್ನಾಟಕದ ಜನಕ್ಕಾಗಿ ಅಲ್ಲ, ಪಕ್ಷಕ್ಕಾಗಿ ಮಾತ್ರ ದೆಹಲಿಗೆ ಹೋಗ್ತಾರೆ-ಆರ್.ಅಶೊಕ್

ಬೆಂಗಳೂರು,ಆಗಸ್ಟ್,13,2026 (www.justkannada.in):  ಸಿಎಂ ಡಿಕೆ ಶಿವಕುಮಾರ್ ಕರ್ನಾಟಕದ ಜನಕ್ಕಾಗಿ ಯಾವತ್ತೂ ದೆಹಲಿಗೆ ಹೋಗಿಲ್ಲ ಕಾಂಗ್ರೆಸ್ ಪಕ್ಷಕ್ಕಾಗಿ ಮಾತ್ರ ದೆಹಲಿಗೆ ಹೋಗುತ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,  ಕಾವೇರಿ ನದಿ ನೀರು ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಗಮನ ಇಲ್ಲ.  ತಮಿಳುನಾಡಿನ ಪರ ತೀರ್ಪು ಬರೋದು ಕರ್ನಾಟಕ ಸರ್ಕಾರದ ವೈಪಲ್ಯ.  ಸರ್ಕಾರ ಕಾವೇರಿ ನೀರು ಮರೆತು ದ್ರೋಹ ಮಾಡುತ್ತಿದೆ. ಡಿಕೆ ಶಿವಕುಮಾರ್ ಅಧಿಕಾರಕ್ಕೆ ಬಂದಾಗಿನಿಂದ ವಿಪಕ್ಷಗಳ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ.  ಸಾಮಾನ್ಯ ಜನರ ಮೇಲೆ ಪೊಲೀಸರ ದೌರ್ಜನ್ಯ ನಡೆಯುತ್ತಿದೆ ಇದು ಗೂಂಡಾ ರಾಜ್ಯ ಆಗಿದೆ ಎಂದು ಕಿಡಿಕಾರಿದರು.ಡಿಕೆಶಿ ಕರ್ನಾಟಕದ ಜನಕ್ಕಾಗಿ ಅಲ್ಲ ashok

ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಕಾವೇರಿ ಸಮಸ್ಯೆಯೇ ಗೊತ್ತಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಮನೆ ಮುಂದೆ ಕಾಯೋದಷ್ಟೇ ಗೊತ್ತು. ತಮಿಳುನಾಡು ಸಿಎಂ ವಿಜಯ್ ಗೆ ಬೆಂಬಲ ಕೊಡೋದಷ್ಟೆ ಗೊತ್ತು. ಹಿಂದೆ ಮೂರು ವರ್ಷ ಸಿದ್ದರಾಮಯ್ಯರನ್ನ ಇಳಿಸುವುದರಲ್ಲೇ ಇದ್ದರು ಎಂದು ಡಿಕೆ ಶಿವಕುಮಾರ್ ವಿರುದ್ದ ಆರ್.ಅಶೋಕ್ ವಾಗ್ದಾಳಿ ನಡೆಸಿದರು.ಪಕ್ಷಕ್ಕಾಗಿ ಮಾತ್ರ ದೆಹಲಿಗೆ ಹೋಗ್ತಾರೆ jk02_new jk02 new

Key words: DK Shivakumar, Delhi, only,  party, R. Ashok