ಬಾಲಿವುಡ್ ನಟಿ , ಮಾಡೆಲ್ ಪೂನಂಪಾಂಡೆ(32) ನಿಧನ.

ಕಾನ್ಪುರ,ಫೆಬ್ರವರಿ,2,2024(www.justkannada.in):  ಬಾಲಿವುಡ್ ನಟಿ ಮತ್ತು ಮಾಡೆಲ್ 32 ವರ್ಷದ ಪೂನಂ ಪಾಂಡೆ  ಗರ್ಭಕಂಠ  ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರ ನಿವಾಸದಲ್ಲಿ  ಬಾಲಿವುಡ್ ನಟಿ ಪೂನಂ ಪಾಂಡೆ ಕೊನೆಯುಸಿರೆಳೆದಿದ್ದಾರೆ. ಅವರು ವಿವಾದಿತ ಹೇಳಿಕೆಗಳಿಂದ ಗುರುತಿಸಿಕೊಂಡಿದ್ದರು. ಇದೀಗ  ಗರ್ಭಕಂಠ ಕ್ಯಾನ್ಸರ್ ನಿಂದ 32 ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ಮಾಡೆಲ್ ಮತ್ತು ನಟಿ ಪೂನಂ ಪಾಂಡೆ  ಗರ್ಭಕಂಠದ ಕ್ಯಾನ್ಸರ್ ನೊಂದಿಗೆ  ಹೋರಾಡಿದ ನಂತರ ನಿಧನರಾದರು ಎಂದು ಅವರ ತಂಡ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಲವ್ ಇಸ್ ಪಾಯಸನ್ ಚಿತ್ರದಲ್ಲಿ ಪೂನಂ ಪಾಂಡೆ ನಟಿಸಿದ್ದರು.

Key words: Bollywood –actress- model -Poonampande (32)- passed away.