ಷೇರು ಮಾರುಕಟ್ಟೆ: ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಸೆನ್ಸೆಕ್ಸ್

ಬೆಂಗಳೂರು, ಜೂನ್ 21, 2023 (www.justkannada.in): ಬಾಂಬೆ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಇಂದು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಇಂದು ಆರಂಭಿಕ ಹಂತದ ವಹಿವಾಟಿನ ವೇಳೆ 146 ಅಂಶಗಳಷ್ಟು ಏರಿಕೆಯಾಗಿ 3,473.70ಕ್ಕೆ ತಲುಪಿತು. ಬಳಿಕ 260.61 ಅಂಶಗಳಷ್ಟು ಏರಿಕೆ ಕಂಡು 63,588.31ಕ್ಕೆ ತಲುಪಿ ಐತಿಹಾಸಿಕ ಗರಿಷ್ಠ ದಾಖಲಿಸಿತು.

ಕಳೆದ ವರ್ಷ ಡಿಸೆಂಬರ್‌ನಲ್ಲಿ 63,583.07 ಅಂಶಗಳಿಗೆ ಸೆನ್ಸೆಕ್ಸ್‌ ತಲುಪಿದ್ದು, ಈವರೆಗಿನ ದಾಖಲೆಯಾಗಿತ್ತು.

ಪವರ್ ಗ್ರಿಡ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ವಿಪ್ರೋ, ಎಚ್‌ಡಿಎಫ್‌ಸಿ, ಹಿಂದುಸ್ತಾನ್‌ ಯುನಿಲಿವರ್‌, ಲಾರ್ಸೆನ್‌ ಆಯಂಡ್ ಟರ್ಬೊ, ಟೆಕ್‌ ಮಹೀಂದ್ರಾ, ಬಜಾಜ್‌ ಫಿನ್‌ಸರ್ವ್, ಟೈಟನ್‌, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರುಗಳು ಹೆಚ್ಚು ಲಾಭ ಪಡೆದಿವೆ.