Monday, September 14, 2026

BDA Apartments

ಕೊನೆಗೂ ರಿಷಬ್ ಪಂತ್ ‘ಕ್ಷಮೆ’ ಕೇಳಿದ ನಟಿ ಊರ್ವಶಿ ರೌಟೇಲಾ! BDA JK_Adv BDA Adv
Home Cinema ಕೊನೆಗೂ ರಿಷಬ್ ಪಂತ್ ‘ಕ್ಷಮೆ’ ಕೇಳಿದ ನಟಿ ಊರ್ವಶಿ ರೌಟೇಲಾ!

ಕೊನೆಗೂ ರಿಷಬ್ ಪಂತ್ ‘ಕ್ಷಮೆ’ ಕೇಳಿದ ನಟಿ ಊರ್ವಶಿ ರೌಟೇಲಾ!

ಬೆಂಗಳೂರು, ಸೆಪ್ಟೆಂಬರ್ 14, 2022 (www.justkannada.in): ಭಾರತ ಕ್ರಿಕೆಟ್ ತಂಡದ ಆಟಗಾರ ರಿಷಬ್ ಪಂತ್ ಹಾಗೂ ನಟಿ ಊರ್ವಶಿ ರೌಟೇಲಾ ಟ್ವಿಟ್ ವಾರ್ ಭಾರೀ ಸದ್ದು ಮಾಡಿತ್ತು.

ಈ ಕುರಿತು ಕೊನೆಗೂ ಈ ಬಗ್ಗೆ ನಟಿ ಊರ್ವಶಿ ರೌಟೇಲಾ ಕ್ಷಮೆ ಕೇಳಿದ್ದಾರೆ.

ಇನ್ನು ಇತ್ತೀಚೆಗೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕ್‌ ಕ್ರಿಕೆಟ್ ಪಂದ್ಯದ ವೇಳೆಯ ಊರ್ವಶಿ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು.

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಊರ್ವಶಿ “ರಿಷಬ್ ಪಂತ್ ನನ್ನ ಹಿಂದೆ ಬಿದ್ದಿದ್ದಾರೆ. ಇನ್ನಿಲ್ಲದಂತೆ ನನ್ನನ್ನು ಕಾಡಿದ್ದರು” ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಿಷಬ್ “ಬಿಟ್ಟಿ ಪ್ರಚಾರಕ್ಕಾಗಿ ಕೆಲವರು ಏನೆಲ್ಲಾಆ ಮಾಡುತ್ತಾರೆ’’ ಎಂದಿದ್ದರು.

ಇದೀಗ ಮತ್ತೆ ಇದಕ್ಕೆ ಪ್ರತಿಕ್ರಿಯಿಸಿರುವ ಊರ್ವಶಿ,”ನಾನು ಏನು ಹೇಳಬೇಕೆಂದಿದ್ದೇನೆಂದರೆ, ಏನು ಹೇಳುವುದು ಗೊತ್ತಾಗುತ್ತಿಲ್ಲ ಕ್ಷಮಿಸಿ, ನನ್ನನ್ನು ಕ್ಷಮಿಸಿ’’ ಎಂದಿದ್ದಾರೆ.