ರಾಜ್ಯಾದ್ಯಂತ ಮತದಾನ ಆರಂಭ: ಹಕ್ಕು ಚಲಾಯಿಸಿದ ಗಣ್ಯರು

ಬೆಂಗಳೂರು, ಮೇ 10, 2023 (www.justkannada.in): ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಗೆ ಎಲ್ಲೆಡೆ ಮತದಾನ ಶುರುವಾಗಿದೆ. 7 ರಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶ ಇರಲಿದೆ.

ಎಲ್ಲಾ ಮತಗಟ್ಟೆಗಳು ಸಜ್ಜುಗೊಂಡಿದ್ದು, ಈಗಾಗಲೇ ಮತದಾನ ಆರಂಭಗೊಂಡಿದೆ. ಮತಯಂತ್ರಗಳು ಕೈಕೊಟ್ಟ ಕಡೆ ತಕ್ಷಣ ಬದಲಾಯಿಸಲಾಗಿದೆ.

ಇನ್ಫೋಸಿಸ್ ಫೌಂಡೇಷನ್ ನ ನಾರಾಯಣ ಮೂರ್ತಿ, ಸುಧಾಮೂರ್ತಿ, ನಟ ರಮೇಶ್ ಅರವಿಂದ್, ನಟಿ ಅಮೂಲ್ಯ, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ಸೇರಿದಂತೆ ಗಣ್ಯರು ಮತಗಟ್ಟೆಗೆಆಗಮಿಸಿ ಮತದಾನ ಮಾಡಿದ್ದಾರೆ.

ಇನ್ನು ಮೈಸೂರಿನ ಚಾಮುಂಡಿಪುರಂನಲ್ಲಿ 96 ವರ್ಷದ ಅಜ್ಜಿ ಮತದಾನ ಮಾಡಿದರು. ಮತಗಟ್ಟೆ ಸಂಖ್ಯೆ 23, ಮೈಸೂರಿನ ಚಾಮುಂಡಿಪುರಂನಲ್ಲಿ 96 ವರ್ಷದ ಅಜ್ಜಿ ಮತಗಟ್ಟೆಗೆ ಬಂದು ಮತದಾನ ಮಾಡಿದರು.

ಮೈಸೂರು ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಮತಗಟ್ಟೆ ಸಂಖ್ಯೆ 139, ಸಿಎಫ್ ಟಿ ಆರ್ ಐ ಶಾಲೆಯಲ್ಲಿ ಮತದಾನ ಮಾಡಿದರು. ಮೈಸೂರು ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಮತದಾನ ಮಾಡಿದರು.