ವಿಶೇಷಚೇತನರಿಗೆ ಮತದಾನ ಮಾಡಲು ಉಚಿತ ವಾಹನ ವ್ಯವಸ್ಥೆ: ಸಹಾಯವಾಣಿ 1950 ಸಂಪರ್ಕಿಸಿ

ಬೆಂಗಳೂರು, ಮೇ 10, 2023 (www.justkannada.in): ಇಂದು ನಡೆಯುತ್ತಿರುವ ವಿಧಾನ ಸಭೆ ಚುನಾವಣೆಯಲ್ಲಿ ವಿಶೇಷಚೇತನರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಮತಗಟ್ಟೆಯಲ್ಲಿ ಬೂತಗನ್ನಡಿ, ವೀಲ್‌ ಚೇರ್‌ಗಳು ಮತ್ತು ಅಂಧ ಮತದಾರರಿಗೆ ಬ್ರೈಲ್‌ ಲಿಪಿಯಲ್ಲಿಓದಿಕೊಂಡು ಮತದಾನ ಮಾಡಲು ಎಲ್ಲಾ ಮತಗಟ್ಟೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.

ಉಚಿತ ವಾಹನ ವ್ಯವಸ್ಥೆ ಪಡೆದು ಮತ ಚಲಾಯಿಸಿ ಮರಳಿ ಮನೆಗೆ ತಲುಪಬಹುದಾಗಿದೆ. ಈ ಸೌಲಭ್ಯ ಪಡೆಯಲು ತಮ್ಮ ವ್ಯಾಪ್ತಿಯ ನಗರ ಅಥವಾ ಗ್ರಾಮೀಣ ವಿಕಲಚೇತನ ಪುನರ್ವಸತಿ ಕಾರ್ಯಕರ್ತರನ್ನು ಅಥವಾ ಚುನಾವಣಾ ಸಹಾಯವಾಣಿ 1950 ಯನ್ನು ಸಂಪರ್ಕಿಸಬಹುದಾಗಿದೆ.

ಮತದಾನದಲ್ಲಿ ವಿಕಲಚೇತನರು ಹಾಗೂ ಅಶಕ್ತ ನಾಗರಿಕರು ಸರಾಗವಾಗಿ ಭಾಗವಹಿಸಲು ಅನುವಾಗುವಂತೆ ನಗರ ವ್ಯಾಪ್ತಿಯಲ್ಲಿ ವಾರ್ಡ್‌ಗೆ ಒಂದು ಆಟೋ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಂದು ಆಟೋ ವಾಹನದ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗಿದೆ