ಮತದಾನ ಮಾಡಿದವರಿಗೆ ಉಚಿತ, ರಿಯಾಯಿತಿ ದರದಲ್ಲಿ ತಿಂಡಿ: ಹೋಟೆಲ್ ಮಾಲೀಕರಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್!

ಬೆಂಗಳೂರು, ಮೇ 10, 2023 (www.justkannada.in): ಮತದಾನ ಜಾಗೃತಿ ಹಾಗೂ ಮತ ಚಲಾಯಿಸುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಹೋಟೆಲ್​ನವರು ಮತದಾರರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ತಿಂಡಿ ನೀಡಲು ಮುಂದಾಗಿರುವ ಕ್ರಮಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಮತದಾರರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ತಿಂಡಿ ನೀಡಲು ಮುಂದಾಗಿದ್ದಕ್ಕೆ ಚುನಾವಣಾಧಿಕಾರಿ ಎಚ್ಚರಿಕೆ ನೀಡಿದ್ದರು.

ಚುನಾವಣಾಧಿಕಾರಿ ವಿರುದ್ಧ ಹೋಟೆಲ್ ಮಾಲೀಕರ ಸಂಘಟನೆ ಹೈಕೋರ್ಟ್ ಮೆಟ್ಟಿಲೇರಿದ್ದು, ಕೊನೆಗೂ ಹೋಟೆಲ್ ಮಾಲೀಕರ ಉಚಿತ/ರಿಯಾಯಿತಿ ದರದ ತಿಂಡಿ ನೀಡಲು ಅವಕಾಶ ಸಿಕ್ಕಿದೆ.

ಚುನಾವಣೆಯಲ್ಲಿ ಹೆಚ್ಚಿನ ಮತದಾನ ಆಗಬೇಕು ಎಂಬ ಸದುದ್ದೇಶದಿಂದ ಬೆಂಗಳೂರಿನ ಎರಡು ಹೋಟೆಲ್​ನವರು ಮತದಾರರಿಗೆ ಪ್ರೋತ್ಸಾಹಕರವಾಗಿ ಉಚಿತ ಹಾಗೂ ರಿಯಾಯಿತಿ ದರದಲ್ಲಿ ತಿಂಡಿತಿನಿಸು ನೀಡುವ ಘೋಷಣೆ ಮಾಡಿದ್ದರು.