ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15 ಲಕ್ಷ ರೂ. ಹಣ ಜಪ್ತಿ.

ಬೆಳಗಾವಿ,ಮೇ,9,2023(www.justkannada.in): ಬೆಳಗಾವಿಯಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 15 ಲಕ್ಷ ರೂ. ಹಣವನ್ನು ಜಪ್ತಿ ಮಾಡಲಾಗಿದೆ.

ಚಿಕ್ಕೋಡಿ ತಾಲೂಕಿನ ಮಾಂಜರಿ ಚೆಕ್​ಪೋಸ್ಟ್​​ ಬಳಿ ಹಣವನ್ನ ಪೊಲೀಸರು ಹಣವನ್ನ ಸೀಜ್ ಮಾಡಿದ್ದಾರೆ.  ಮಹಾರಾಷ್ಟ್ರದ ಗಡಹಿಂಗ್ಲಜ್‌ನಿಂದ ಮಾಂಜರಿಗೆ ಬರುತ್ತಿದ್ದ ಕಾರು ತಪಾಸಣೆ ವೇಳೆ ಚೀಲದಲ್ಲಿ 15 ಲಕ್ಷ ರೂ ಹಣ ಪತ್ತೆಯಾಗಿದ್ದು, ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ. ನಂತರ ಆದಾತ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು  ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: 15 lakhs – money-without- documents- Siege