ರಾಜ್ಯ ಸರಕಾರದಿಂದಲೇ ಆಪ್ ಆಧಾರಿತ ಆಟೋ ಟ್ಯಾಕ್ಸಿ ಸೇವೆ ಆರಂಭಿಸಲು ನಿರ್ಧಾರ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಆಗಸ್ಟ್ 05, 2023 (www.justkannada.in): ಆಪ್ ಆಧಾರಿತ ಆಟೋ ಟ್ಯಾಕ್ಸಿ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಓಲಾ ಉಬರ್ ಸೇರಿದಂತೆ ಆಪ್ ಆಧಾರಿತ ಸಾರಿಗೆ ಸಂಸ್ಥೆಗಳು ಆಟೋ ಮತ್ತು ಟ್ಯಾಕ್ಸಿ ಶೋಷಿಸುತ್ತಿವೆ ಎಂಬ ಆರೋಪಗಳು ಆಗಾಗ್ಗೆ ಕೇಳಿ ಬರುತ್ತಿವೆ. ಇದನ್ನು ತಪ್ಪಿಸಲು ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆ ಒದಗಿಸಲು ಹಾಗೂ ವ್ಯಾಪಾರದ ಸಾರಿಗೆ ಸಂಸ್ಥೆಗಳಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕ ಮಾಲೀಕರ ಮೇಲೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಲು ಕ್ಷೇತ್ರದಲ್ಲಿ ಆಪ್ ಆಧಾರಿತ ಆಟೋ ಟ್ಯಾಕ್ಸಿ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಅನುಕೂಲವಾಗಲೆಂದು ಆಪ್ ಆಧಾರಿತ ಅಭಿವೃದ್ಧಿಪಡಿಸಲು ಸಂಸ್ಥೆಯನ್ನು ಗುರುತಿಸಿ ಜವಾಬ್ದಾರಿಯನ್ನು ನೀಡಲಾಗುತ್ತದೆ. ವರ್ಷದ ಕೊನೆಯಲ್ಲಿ ಈ ಆಪ್ ಜಾರಿಗೆ ಬರಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಸಾರಿಗೆ ಇಲಾಖೆ ಸೂಚಿಸಿದ ಪ್ರಕಾರ ಈಗ ಯಾವ ರೀತಿಯಾಗಿ ಊರ ಉಬರ್ ಆಪ್ ಬಳಕೆಯಲ್ಲಿವೇಯೋ ಅದೇ ರೀತಿ ಈ ಆಪ್ ಕೂಡ ಸಿದ್ಧಪಡಿಸಲಾಗುತ್ತದೆ. ಅಭಿವೃದ್ಧಿಪಡಿಸಿದ ನಂತರ ಟ್ಯಾಕ್ಸಿ ಮತ್ತು ಆಟೋ ಚಾಲಕರು ಈ ಆಪ್ಕೆ ನೊಂದನೇ ಮಾಡಿಕೊಳ್ಳಬಹುದು ಎಂದರು.