ಮಹಾರಾಷ್ಟ್ರ, ಹರಿಯಾಣಾದ ಚುನಾವಣಾ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆ – ಮಾಜಿ ಸಚಿವ ಸತೀಶ್ ಜಾರಕಿಹೊಳಿ ಟಾಂಗ್…

ಬೆಳಗಾವಿ,ಅ,25,2019(www.justkannada.in): ನಿನ್ನೆ ಪ್ರಕಟಗೊಂಡ ಮಹಾರಾಷ್ಟ್ರ ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದರು.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಸತೀಶ್ ಜಾರಕಿಹೊಳಿ,  ಬಿಜೆಪಿಯವರು ಮೋದಿ ಅಲೆ ಭ್ರಮೆಯಲ್ಲಿ ಇದ್ದರು. ಮೋದಿ ಅಲೆ ಮತ್ತು ರಾಷ್ಟ್ರೀಯ ವಿಚಾರದ ಮೇಲೆ ಗೆಲ್ಲುತ್ತೇವೆ ಎಂದುಕೊಂಡಿದ್ದರು. ಆದರೆ ಮಹಾರಾಷ್ಟ್ರ, ಹರಿಯಾಣಾದಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಎರಡು ರಾಜ್ಯದಲ್ಲಿ ಜನರು ಸ್ಥಳೀಯ ವಿಚಾರಗಳನ್ನ ಗಮನದಲ್ಲಿಟ್ಟುಕೊಂಡು ಮತ ಹಾಕಿದ್ದಾರೆ. ಈ ಫಲಿತಾಂಶ ಬಿಜೆಪಿಗೆ ಎಚ್ಚರಿಕೆ ಗಂಟೆ ಆಗಿದೆ ಎಂದು ನುಡಿದರು.

ಕೊಲ್ಲಾಪುರ, ಸಾಂಗ್ಲಿಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ. ಮೋದಿ ಆರ್ಥಿಕ ನೀತಿ ಬಿಜೆಪಿ ವ್ಯಾಪಕವಾದಗಳಿಗೆ ಪಾಠ ಕಲಿಸಿದ್ದಾರೆ. ಮೋದಿ ನಾಲ್ಕೈದು ಕಂಪನಿಗಳಿಗೆ ಬೆಳೆಸಲು ಹೊರಟಿದ್ದಾರೆ. ಇದರಿಂದ ದೇಶಕ್ಕೆ ಹೊಡೆತ ಬೀಳುತ್ತದೆ ಎಂದು ಸತೀಶ್ ಜಾರಕಿಹೊಳಿ ಕಿಡಿಕಾರಿದರು.

ರಮೇಶ್ ಜಾರಕಿಹೊಳಿ ಸಾಲಗಾರನಾಗಿದ್ದರೆ ಅವರ ಅಳಿಯ ಅಂಬಿರಾವ್ ಪಾಟೀಲ್ ಅಪಾರ ಪ್ರಮಾಣದ ಆಸ್ತಿಯ ಒಡೆಯನಾಗಿದ್ದಾನೆ. ಗೋಕಾಕ್ ಪಂಚಾಯಿತಿ, ನಗರಸಭೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ ನಡೆದಿದ್ದು, ಅಂಬಿರಾವ್ ಎಲ್ಲದರಲ್ಲೂ ಪಾಲು ಪಡೆಯುತ್ತಿದ್ದಾನೆ ಎಂದು ಆರೋಪಿಸಿದರು.

Key words: Maharashtra- Haryana- polls- warns- BJP-Former minister -Satish jarakiholi