ಕುಮಾರಸ್ವಾಮಿ ಯಾವ ಬಾಂಬ್ ಹಾಕಿದರೂ ನಾನು ಬಗ್ಗಲ್ಲ: ಡಿಸಿಎಂ ಡಿಕೆಶಿ ತಿರುಗೇಟು

ಕಲಬುರಗಿ, ಆಗಸ್ಟ್ 05, 2023 (www.justkannada.in): ಯಾರನ್ನೋ ಹೆದರಿಸಿದಂತೆ ನನ್ನನ್ನು ಹೆದರಿಸಿದರೆ ಪ್ರಯೋಜನವಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್ಡಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಇಂದು ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಎಚ್ಡಿಕೆ ಹತ್ತಿರ ಯಾವ ದಾಖಲೆ ಇದೆಯೋ ಲೋಕಾಯುಕ್ತಕ್ಕೆ ಸಲ್ಲಿಸಲಿ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಯಾವ ಬಾಂಬ್ ಹಾಕಿದರೂ ನಾನು ಬಗ್ಗಲ್ಲ. 1975 ರಿಂದ ನಾನು ಇಂತಹ ಸಾಕಷ್ಟು ಬಾಂಬುಗಳನ್ನು ನೋಡಿದ್ದೇನೆ ಡಿಕೆ ಶಿವಕುಮಾರ್ ಕೂಡ ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.