Saturday, August 22, 2026

BDA Apartments

Home Front Page ಸರ್ವಜನಾಂಗದ ಅಭಿವೃದ್ದಿ, ಭಾರತದ ಏಳಿಗೆಯ ಬಜೆಟ್- ಆರ್.ಅಶೋಕ್ ಬಣ್ಣನೆ.

ಸರ್ವಜನಾಂಗದ ಅಭಿವೃದ್ದಿ, ಭಾರತದ ಏಳಿಗೆಯ ಬಜೆಟ್- ಆರ್.ಅಶೋಕ್ ಬಣ್ಣನೆ.

ನವದೆಹಲಿ,ಫೆಬ್ರವರಿ,1,2024(www.justkannada.in): ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಮಧ್ಯಂತರ ಬಜೆಟ್ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಆರ್.ಅಶೋಕ್,  ನಿರ್ಮಲಾ ಸೀತಾರಾಮನ್ ಅವರು ಪೂರಕ ಬಜೆಟ್ ಮಂಡಿಸಿದ್ದಾರೆ. ಇದು ಭಾರತದ ಏಳಿಗೆಯ  ಬಜೆಟ್. ಸರ್ವಜನಾಂಗದ ಅಭಿವೃದ್ದಿ ಇದರಲ್ಲಿ ಪ್ರಮುಖವಾಗಿದೆ ಚುನಾವಣೆ ಹತ್ತಿರದಲ್ಲಿದ್ದರೂ ರಾಜಕಾರಣ ಮಾಡಿಲ್ಲಎಂದಿದ್ದಾರೆ.

ಅಭಿವೃದ್ದಿ ಗಮನದಲ್ಲಿಟ್ಟುಕೊಂಡು ಬಜೆಟ್ ನೀಡಿದ್ದಾರೆ. ಮಧ್ಯಮ ವರ್ಗದವರಿಗೆ ಬಜೆಟ್ ಸಿಹಿಸುದ್ದಿ ನೀಡಿದೆ ಎಂದು ಆರ್.ಅಶೋಕ್ ತಿಳಿಸಿದರು.

Key words:  Development – India- Prosperity -Budget – R. Ashok