ನ.17 ರಿಂದ ಡಿಗ್ರಿ ಕಾಲೇಜುಗಳ ಆರಂಭ : ತರಗತಿಗಳ ಪ್ರಾರಂಭಕ್ಕೆ ಮೈಸೂರು ವಿವಿ ಸಿದ್ಧತೆ

ಮೈಸೂರು,ನವೆಂಬರ್,14,2020(www.justkannada.in) : ನವೆಂಬರ್.17 ರಿಂದ ಡಿಗ್ರಿ ಕಾಲೇಜುಗಳ ಆರಂಭ ಹಿನ್ನೆಲೆ ತರಗತಿಗಳ ಪ್ರಾರಂಭಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಸಿದ್ಧತೆ ನಡೆಸಿದೆ.kannada-journalist-media-fourth-estate-under-loss

ಮೈಸೂರು ವಿವಿ ತರಗತಿಗಳು ಪ್ರಾರಂಭವಾಗುವ ಹಿನ್ನೆಲೆಯಲ್ಲಿ ವಿವಿ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ವಿಭಾಗಗಳ ಮುಖ್ಯಸ್ಥರ ಜೊತೆ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಈಗಾಗಲೇ ಸಭೆ ನಡೆಸಿದ್ದಾರೆ.

ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಹಿತದೃಷ್ಟಿಯಿಂದ ಸೂಕ್ತ ಮುಂಜಾಗ್ರತೆ ವಹಿಸಿ, ನವಂಬರ್ 17 ರಿಂದ ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ.ಮೈಸೂರು ವಿವಿ ವತಿಯು ಸರ್ಕಾರ ಮಾರ್ಗಸೂಚಿಗಳ ಕಡ್ಡಾಯ ಅಳವಡಿಕೆ ಮಾಡಿಕೊಂಡು ಕಾಲೇಜುಗಳ ಪ್ರಾರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.

Start-Degree-Colleges- navenbar.17Mysore VV-preparation-start-classes

key words : Start-Degree-Colleges- navenbar.17
Mysore VV-preparation-start-classes