Saturday, October 17, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ನೇಮಕಾತಿ ಅಕ್ರಮ: ರಾಜೀನಾಮೆ ಸವಾಲು ಹಾಕಿದ ಸಚಿವ ಖರ್ಗೆಗೆ ಕೇಂದ್ರ ಸಚಿವ HDK ತಿರುಗೇಟು

ನೇಮಕಾತಿ ಅಕ್ರಮ: ರಾಜೀನಾಮೆ ಸವಾಲು ಹಾಕಿದ ಸಚಿವ ಖರ್ಗೆಗೆ ಕೇಂದ್ರ ಸಚಿವ HDK ತಿರುಗೇಟು

ಸಿದ್ದರಾಮಯ್ಯ ವಿರುದ್ದದ ಸ್ಟಿಂಗ್‌ ಸಂಚಿನಲ್ಲಿ ಶಾಮೀಲಾದ ʼನೀಲಿಕಣ್ಣಿನ ಮಂತ್ರಿʼ- ಹೆಚ್.ಡಿಕೆ ವಾಗ್ದಾಳಿ

ನವದೆಹಲಿ,ಆಗಸ್ಟ್,31,2026 (www.justkannada.in): ಪಶುವೈದ್ಯಾಧಿಕಾರಿಗಳ ನೇಮಕಾತಿ ಮತ್ತುಎಇಇ ನೇಮಕಾತಿಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಭಾಗಿಯಾಗಿದ್ದರೆ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮವಾಗಿದೆ. ಏಳೆಂಟು ಬಾರಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಆದರೂ ಕೋರ್ಟ್ ಗೆ ಯಾಕೆ ಸರ್ಕಾರ ಲಿಖಿತ ಉತ್ತರ ನೀಡಿಲ್ಲ ಎಂದು ಪ್ರಶ್ನಿಸಿದರು.ನೇಮಕಾತಿ ಅಕ್ರಮ priyank

ರೆಸಾರ್ಟ್‍ಗಳಲ್ಲಿಆಯ್ಕೆ ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದಾರೆ.  ಕೆಲವು ದಾಖಲೆ ಸಂಗ್ರಹ ಮಾಡುವ ಸನ್ನೀವೇಶದಲ್ಲಿ ಗೊತ್ತಾಯಿತು.  ಪಂಚಾಯತ್ ರಾಜ್ ಇಲಾಖೆಯಲ್ಲಿ 24 ಎಇಇ ನೇಮಕಾತಿ ನಡೆದಿತ್ತು.   ಆ ಸಮಯದಲ್ಲಿ ಪರೀಕ್ಷೆಯಲ್ಲಿ ಒಎಂಆರ್  ಶೀಟ್ ಬದಲಾಗಿದೆ. ಪ್ರಿಯಾಂಕ್ ಬೆಳಿಗ್ಗೆಯಿಂದ ಸಂಜೆ ತನಕ ಆರ್ ಎಸ್ ಎಸ್ ಜಪ ಮಾಡುತ್ತಿದ್ದಾರೆ.   ಇವರ ಇಲಾಖೆಯಲ್ಲಿನ ಅಕ್ರಮಗಳ ಬಗ್ಗೆ ನಾನು ಮಾಹಿತಿ ಕೊಟ್ಟಿದ್ದೇನೆ ಅಕ್ರಮದ ಬಗ್ಗೆ ನಾನು ದಾಖಲೆ ಬಿಡುಗಡೆ ಮಾಡಿದ್ದೇನೆ ಆದರೆ ಜ್ಷಾನ ಇಟ್ಟುಕೊಂಡು ಮಾತನಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ.  ಜ್ಞಾನ ಬಿಟ್ಟು ಮಾತನಾಡುತ್ತಿರುವವರು ಯಾರು?  ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿ.  ಹಿಟ್ ಅಂಡ್ ರನ್ ನಾನಲ್ಲ ನೀವು ಎಂದು ಗುಡುಗಿದರು.ನೇಮಕಾತಿ ಅಕ್ರಮ jk02_new jk02 new

2024ರ ಫೆ.1 ರಂದು ಸಿಎಸ್ ಗೆ ಕೆಪಿಎಸ್ ಸಿ ಕಾರ್ಯದರ್ಶಿಯು ಡಿಪಿಆರ್ ಮತ್ತ ಆರ್ ಡಿಪಿಆರ್ ಕಾರ್ಯದರ್ಶಿಗೆ ಪತ್ರ ಬರೆಯುತ್ತಾರೆ. ನೇಮಕಾತಿ ಆದೇಶ ನೀಡಬಾರದು ಎಂದು ಪತ್ರ ಬರೆಯುತ್ತಾರೆ. ಪ್ರಿಯಾಂಕ್ ಖರ್ಗೆ ಅವರೇ ರಾಜಕೀಯ ನಿವೃತ್ತಿ ಪಡೆಯಿರಿ ಅಂತಿಲ್ಲ ಏನು ಕ್ರಮ ಆಗಿದೆ ಹೇಳಿ? ಎಂದು ವಾಗ್ದಾಳಿ ನಡೆಸಿದರು.

Key words: Union Minister, HDK, Minister, Priyank Kharge,  resign