Tuesday, September 15, 2026

BDA Apartments

KPSC ಹಗರಣ: ಸಂಪೂರ್ಣ ವರದಿ ಬರುವವರೆಗೆ ಮಾತನಾಡಲ್ಲ- ಸಿಎಂ ಡಿಕೆ ಶಿವಕುಮಾರ್ BDA JK_Adv B...
Home Front Page KPSC ಹಗರಣ: ಸಂಪೂರ್ಣ ವರದಿ ಬರುವವರೆಗೆ ಮಾತನಾಡಲ್ಲ- ಸಿಎಂ ಡಿಕೆ ಶಿವಕುಮಾರ್

KPSC ಹಗರಣ: ಸಂಪೂರ್ಣ ವರದಿ ಬರುವವರೆಗೆ ಮಾತನಾಡಲ್ಲ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಆಗಸ್ಟ್,31,2026 (www.justkannada.in): ಕೆಪಿಎಸ್ ಸಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಆಗಿ ಸಂಪೂರ್ಣ ವರದಿ ಬರುವವರೆಗೆ ನಾನು ಮಾತನಾಡಲ್ಲ. ಕಾಲವೇ ಉತ್ತರ ಕೊಡುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ತನಿಖೆ ವಿಚಾರವಾಗಿ ಮಾತನಾಡಲ್ಲ.  ಪ್ರಕರಣದಲ್ಲಿ ಯಾರ್ಯಾರನ್ನು ಅರೆಸ್ಟ್ ಮಾಡಿದ್ದಾರೋ ಗೊತ್ತಿಲ್ಲ. ಯಾರ್ಯಾರು ಭಾಗಿಯಾಗಿದ್ದಾರೂ ಅವರನ್ನ ಬಂಧಿಸುತ್ತಾರೆ. ಕೆಪಿಎಸ್ ಸಿ ಅಧ್ಯಕ್ಷರನ್ನ ನೇಮಕ ಮಾಡಿದ್ದು ಯಾರು?   ಸಿಎಂ ಆಗಿ ಸಂಪೂರ್ಣವರದಿ ಬರುವವರೆಗೆ ಮಾತನಾಡಲ್ಲ.  ಕಾಲವೇ ಉತ್ತರ ಕೊಡುತ್ತೆ ಎಂದರು.KPSC ಹಗರಣ dk shivakumar-dks.jpg1 dk shivakumar dks.jpg1

ನೇಪಾಳ ಪ್ರವಾಹದಲ್ಲಿ ಕನ್ನಡಿಗರಿ ಸಿಲುಕಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್,   14 ಜನ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ನೇಪಾಳಕ್ಕೆ ಹೋಗಿದ್ದ  ಒಂದು ತಂಡ ಸಂಪರ್ಕಕ್ಕೆ ಸಿಕ್ಕಿಲ್ಲ. ಕೇಂದ್ರ ವಿದೇಶಾಂಗ ಸಚಿವಾಲಯ ಜೊತೆ ಮಾತನಾಡಿದ್ದೇವೆ. ನಮ್ಮ ಅಧಿಕಾರಿಗಳನ್ನ ಕಳುಹಿಸಿಕೊಟ್ಟಿದ್ದೇವೆ  ಎಂದರು.ಸಂಪೂರ್ಣ ವರದಿ ಬರುವವರೆಗೆ ಮಾತನಾಡಲ್ಲ jk02_new jk02 new

Key words: KPSC scam,, CM, DK Shivakumar