Saturday, September 12, 2026

BDA Apartments

Home Front Page ಎಇಇ ನೇಮಕಾತಿಯಲ್ಲಿ ಹೆಚ್ ಡಿಕೆ ಅಪಪ್ರಚಾರ: ನಾನು ಭಾಗಿಯಾಗಿದ್ರೆ ರಾಜೀನಾಮೆ- ಸಚಿವ ಪ್ರಿಯಾಂಕ್ ಖರ್ಗೆ ಸವಾಲು

ಎಇಇ ನೇಮಕಾತಿಯಲ್ಲಿ ಹೆಚ್ ಡಿಕೆ ಅಪಪ್ರಚಾರ: ನಾನು ಭಾಗಿಯಾಗಿದ್ರೆ ರಾಜೀನಾಮೆ- ಸಚಿವ ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು,ಆಗಸ್ಟ್,31,2026 (www.justkannada.in): ಎಇಇ ಅಭ್ಯರ್ಥಿಗಳ ನೇಮಕಾತಿ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್ ಡಿಕೆ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಅಭ್ಯರ್ಥಿಗಳ ನೇಮಕಾತಿಯಲ್ಲಿ ಭಾಗಿಯಾಗಿದ್ದರೇ ನಾನು ರಾಜಕೀಯ ನಿವೃತ್ತ ಪಡೆಯುತ್ತೇನೆ ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಎಸ್ ಸಿ ತನಿಖಾ ವರದಿಯನ್ನು ಕುಮಾರಸ್ವಾಮಿ ಹತ್ತಿರ ತೆಗೆದುಕೊಳ್ಳಿ.  ಒಎಂಆರ್ ಶೀಟ್ ಇದ್ದಿದ್ದರೇ ಅದು ಕೆಪಿಎಸ್ಸಿಯಲ್ಲಿ ಇರುತ್ತದೆ. ಅದು ಆರ್ ಡಿಪಿಆರ್ ಇಲಾಖೆಯಲ್ಲಿ ಇರುತ್ತಾ?  ಪರೀಕ್ಷೆ ನಡೆಸೋದು ಸೇರಿ ಪ್ರತಿಯೊಂದು ಮಾಡುವುದು ಕೆಪಿಎಸ್ ಸಿ ಸ್ವಲ್ಪನಾದರೂ ಹೆಚ್ ಡಿಕೆಗೆ ಸಾಮಾನ್ಯ ಜ್ಞಾನ ಇದೆಯಾ ಕೆಪಿಎಸ್ ಸಿ ಮೇಲೆ ಆರೋಪ ಬಂದಿರೋದು.  ನೇಮಕಾತಿಗೂ ನಮ್ಮ ಇಲಾಖೆಗೂ ನನಗೂ ಏನು ಸಂಬಂಧ?  ಕೆಪಿಎಸ್ ಸಿ ಅಕ್ರಮಕ್ಕೂ ನನಗೆ  ಏನು ಸಂಬಂಧ? ಎಂದು ಪ್ರಶ್ನಿಸಿದರು.

ಎಇಇ ನೇಮಕಾತಿಯಲ್ಲಿ ಹೆಚ್ ಡಿಕೆ ಅಪಪ್ರಚಾರ hdk

ಆಳವಾಗಿ ತನಿಖೆ ಮಾಡಿದರೇ ಜೆಡಿಎಸ್ ಬಿಜೆಪಿಗರು ಸುದ್ದಿಗೋಷ್ಠಿ ಮಾಡುತ್ತಾರೆ. ನಾನಲ್ಲ ನಾನಲ್ಲ ಎಂದು ಜೆಡಿಎಸ್ ಬಿಜೆಪಿಯವರು ಸುದ್ದಿಗೋಷ್ಠಿ  ಮಾಡುತ್ತಾರೆ  ಕೆಪಿಎಸ್ ಸಿ ಮಾಜಿ ಅಧ್ಯಕ್ಷರನ್ನ ಜೈಲಿನಲ್ಲಿ ಭೇಟಿಯಾಗಿದ್ದು ಯಾರು? ದಾಖಲೆ ಇದ್ದರೆ ಕೊಡಿ ನಾನೇ ತನಿಖೆ ಮಾಡಿಸುತ್ತೇನೆ.  ಹೆಚ್ ಡಿಕೆ ಸುಮ್ಮನೆ ಹಿಟ್ ಅಂಡರ್ ರನ್ ಮಾಡಿದ್ರೆ ಹೇಗೆ ಅಕ್ರಮದಲ್ಲಿ ಯಾರು ಇದ್ದಾರೆಂದು ತನಿಖೆ ಮಾಡಿಸುತ್ತೇವೆ ಎಂದರು.ನಾನು ಭಾಗಿಯಾಗಿದ್ರೆ ರಾಜೀನಾಮೆ jk02_new jk02 new

Key words: HDK, AEE recruitment, resign, Minister, Priyank Kharge