Saturday, October 17, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ಕಾವೇರಿ ನೀರು ವಿವಾದ: ಸಿಡಬ್ಲ್ಯುಆರ್ ಸಿಗೆ ಮಹತ್ವದ ಸೂಚನೆ ಕೊಟ್ಟ ಸುಪ್ರೀಂ

ಕಾವೇರಿ ನೀರು ವಿವಾದ: ಸಿಡಬ್ಲ್ಯುಆರ್ ಸಿಗೆ ಮಹತ್ವದ ಸೂಚನೆ ಕೊಟ್ಟ ಸುಪ್ರೀಂ

SIR ವಿವಾದ: ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್‌

ನವದೆಹಲಿ,ಆಗಸ್ಟ್,31,2026 (www.justkannada.in):  ಕಾವೇರಿ  ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿ 15ದಿನಗಳಿಗೊಮ್ಮೆ ಸಭೆ ನಡೆಸಿ ಪರಿಷ್ಕೃತ ಮಾಹಿತಿ ನೀಡಿ  ಎಂದು ಕಾವೇರಿ ನೀರು ನಿರ್ವಹಣಾ ಸಮಿತಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಕಾವೇರಿ ನೀರು ಹರಿಸುವಂತೆ ತಮಿಳುನಾಡು  ಸಲ್ಲಿಸಿರುವ ಅರ್ಜಿಯನ್ನ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿಕ್ರಮನಾಥ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕರ್ನಾಟಕದಿಂದ ಕಾವೇರಿ ನೀರು ಹರಿಸುವಂತೆ ತಮಿಳುನಾಡು ಮನವಿ ಮಾಡಿದೆ.

ಈ ವೇಳೆ ತಮಿಳುನಾಡು ಪರ ವಾದ ಮಂಡಿಸಿದ ವಕೀಲರು, ಕರ್ನಾಟಕ ಕೃಷಿಗೆ ನೀರು ಹರಿಸುತ್ತಿದೆ ಎಂದರು. ಆದರೆ ಇದಕ್ಕೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲಿ ಒಂದು ಎಕರೆ ಕೃಷಿಗೆ ನೀರು ಹರಿಸಿಲ್ಲ ಎಂದು ವಾದ ಮಂಡಿಸಿತು.ಕಾವೇರಿ ನೀರು ವಿವಾದ krs

ಈ ವೇಳೆ ಕಾವೇರಿ ಜಲಾನಯನ ಪ್ರದೇಶದ ಡ್ಯಾಮ್ ತುಂಬುತ್ತಿದೆ ಆದರೆ ಕರ್ನಾಟಕ ಸಮರ್ಪಕವಾಗಿ ನಿರ್ಹರಿಸುತ್ತಿಲ್ಲ 35 ಟಿಎಂಸಿ ನೀರು ಬರಬೇಕಿತ್ತು ಆದರೆ ಅಷ್ಟು ನೀರು ಹರಿಸಿಲ್ಲ ಬಾಕಿ ಉಳಿಸಿಕೊಂಡಿರುವ ನೀರು ಹರಿಸಬೇಕು ಎಂದು ತಮಿಳುನಾಡು ವಾದ ಮಂಡಿಸಿತು.

ಕರ್ನಾಟಕ ನೀರು ಹರಿಸುತ್ತಿದೆಯಲ್ಲ ಎಂದು  ಸುಪ್ರೀಂಕೋರ್ಟ್ ನ್ಯಾಯಪೀಠವು ತಮಿಳುನಾಡಿಗೆ ಪ್ರಶ್ನಿಸಿತು. ಆದರೆ ತಮಿಳುನಾಡು ಬಾಕಿ ಉಳಿದ ನೀರು ಹರಿಸಬೇಕು ಎಂದು ಮನವಿ ಮಾಡಿತು.ಕಾವೇರಿ ನೀರು ವಿವಾದ jk02_new jk02 new

ನಂತರ ಪ್ರತಿ 15 ದಿನಕ್ಕೊಮ್ಮೆ ಸಿಡಬ್ಲ್ಯೂಆರ್‌ಸಿ ಸಭೆ ನಡೆಸಿ ಪರಿಷ್ಕೃತ ಮಾಹಿತಿ ನೀಡುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿಗೆ ಸುಪ್ರೀಂಕೋರ್ಟ್ ಸೂಚಿಸಿ ವಿಚಾರಣೆ ಸೆಪ್ಟೆಂಬರ್ 15ಕ್ಕೆ ಮುಂದೂಡಿತು.

Key words: Cauvery water, dispute, Supreme Court,  CWRC