Monday, September 21, 2026

BDA Apartments

ಬೆಲೆ ಏರಿಕೆಯೇ ಸರ್ಕಾರದ ಸಾಧನೆ: ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚ...
Home Front Page ಬೆಲೆ ಏರಿಕೆಯೇ ಸರ್ಕಾರದ ಸಾಧನೆ: ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಶ್ರೀರಾಮುಲು

ಬೆಲೆ ಏರಿಕೆಯೇ ಸರ್ಕಾರದ ಸಾಧನೆ: ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಶ್ರೀರಾಮುಲು

ರಾಯಚೂರು,ಮಾರ್ಚ್,23,2026 (www.justkannada.in):   ಎರಡು ವರ್ಷಗಳಲ್ಲಿ ಹಲವು ವಸ್ತುಗಳ ಬೆಲೆ ಏರಿಕೆ ಮಾಡಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಮಾಜಿ ಸಚಿವ ಶ್ರೀರಾಮುಲು ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು, ಈ ಬಾರಿ ಬಾಗಲಕೋಟೆಯಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ಇದೆ.  ಎರಡು ವರ್ಷದಲ್ಲಿ ಬೆಲೇ ಏರಿಕೆಯೇ ಸರ್ಕಾರದ ಸಾಧನೆಯಾಗಿದೆ. ಅಧಿಕಾರಕ್ಕಾಗಿ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ನಡುವೆ ಪೈಪೋಟಿ ಇದೆ. ಸರ್ಕಾರದ ಮಾತನ್ನು ಅಧಿಕಾರಿಗಳು ಕೇಳ್ತಿಲ್ಲ ಎಂದು ಕುಟುಕಿದರು.

ಎರಡೂ ಕ್ಷೇತ್ರಗಳಲ್ಳೂ ಬಿಜೆಪಿ ಅಭ್ಯರ್ಥಿಗಳೆ ಗೆಲ್ಲುತ್ತಾರೆ.  ಎರಡು ಕ್ಷೇತ್ರಗಳಲ್ಲಿ ಜವಾಬ್ದಾರಿ ಕೊಟ್ಟಿದ್ದಾರೆ ಅದನ್ನು ನಿಭಾಯಿಸುತ್ತೇನೆ  ಎಂದು ಶ್ರೀರಾಮುಲು ತಿಳಿಸಿದರು.

Key words: Price hike, government, achievement, Sriramulu